ಹಳೆಯ ಸಂಭಾಷಣೆಯ ಆಡಿಯೋ ಲೀಕ್: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದು, ಹಳೆಯ ಸಂಭಾಷಣೆಯನ್ನು ಈಗ ಹರಿಬಿಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಈ ವರ್ಷದ ಫೆಬ್ರವರಿ 26 ರಂದು ವಿಜಯ ದೇವರಕೊಂಡ ಅವರೊಂದಿಗೆ ರಶ್ಮಿಕಾ ವಿವಾಹವಾದ ಕೆಲವೇ ವಾರಗಳಲ್ಲಿ ಈ ಆಡಿಯೋ ಮುನ್ನೆಲೆಗೆ ಬಂದಿದೆ.
ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ 2016ರ ‘ಕಿರಿಕ್ ಪಾರ್ಟಿ’ ಚಿತ್ರದ ಸಮಯದಲ್ಲಿ ಭೇಟಿಯಾಗಿ, 2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ 2018ರಲ್ಲಿ ಈ ಜೋಡಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿತ್ತು. ಈಗ ಮುನ್ನೆಲೆಗೆ ಬಂದಿರುವ ಈ ಆಡಿಯೋ ಕ್ಲಿಪ್‌ನಲ್ಲಿ ಸುಮನ್ ಮಂದಣ್ಣ ಅವರು ಅಂದಿನ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಸುಮಾರು ಎಂಟು ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾದ ಖಾಸಗಿ ಸಂಭಾಷಣೆಯ  ಆಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆಡಿಯೋ ರಶ್ಮಿಕಾ ಅವರ ಹಳೆಯ ಎಂಗೇಜ್‌ಮೆಂಟ್ ವಿಚಾರಕ್ಕೆ ಸಂಬಂಧಿಸಿದ್ದು, ಇದನ್ನು ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ, ಈಗ ಸಂದರ್ಭಕ್ಕೆ ತಕ್ಕಂತೆ ತಿರುಚಿ ಪ್ರಸಾರ ಮಾಡಲಾಗುತ್ತಿದೆ ಎಂದು ರಶ್ಮಿಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಈ ಆಡಿಯೋ ವೈರಲ್ ಬೆನ್ನಲ್ಲೇ ರಶ್ಮಿಕಾ ಎಕ್ಸ್ (ಟ್ವಿಟ್ಟರ್) ಮೂಲಕ ಸುದೀರ್ಘ ಪ್ರತಿಕ್ರಿಯೆ ನೀಡಿದ್ದಾರೆ. “ಕಳೆದ 8 ವರ್ಷಗಳಿಂದ ನನ್ನ ವಿರುದ್ಧ ತಪ್ಪು ಮಾಹಿತಿ ಹರಡುವ ಮತ್ತು ವೈಯಕ್ತಿಕ ದಾಳಿ ಮಾಡುವ ಅಭಿಯಾನ ನಡೆಯುತ್ತಿದೆ. ವ್ಯೂಸ್ ಮತ್ತು ರೀಚ್‌ಗಾಗಿ ನನ್ನ ಮಾತುಗಳನ್ನು ತಿರುಚಲಾಗುತ್ತಿದೆ. ಇಷ್ಟು ದಿನ ನಾನು ಮೌನವಾಗಿದ್ದೆ, ಆದರೆ ಕಳೆದ 24 ಗಂಟೆಗಳಲ್ಲಿ ನಡೆದ ಘಟನೆಗಳು ಮಿತಿ ಮೀರಿವೆ ಎಂದು ಹೇಳಿದ್ದಾರೆ.
8 ವರ್ಷಗಳ ಹಿಂದಿನ ಖಾಸಗಿ ಸಂಭಾಷಣೆಯನ್ನು ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ ಈಗ ಹರಿಬಿಡಲಾಗಿದೆ. ನನ್ನ ವೈಯಕ್ತಿಕ ಜೀವನದ ಹೊಸ ಬೆಳವಣಿಗೆಗಳ (ಮದುವೆ) ಸಮಯದಲ್ಲಿಯೇ ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಲು ಇದನ್ನು ಬಳಸಲಾಗುತ್ತಿದೆ. ಈ ವಿಷಯಕ್ಕೂ ಸಂಬಂಧವಿಲ್ಲದ ನನ್ನ ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಇದರಲ್ಲಿ ಎಳೆಯಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

“ಇಷ್ಟು ದಿನ ನನ್ನ ಮೇಲೆ ದಾಳಿ ನಡೆದಾಗ ಸುಮ್ಮನಿದ್ದೆ. ಆದರೆ ಈಗ ಇತರರಿಗೂ ತೊಂದರೆಯಾಗುತ್ತಿರುವುದರಿಂದ ನಾನು ಮೌನ ಮುರಿಯಲೇಬೇಕಿದೆ. ಈ ಕೃತ್ಯವನ್ನು ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
“ಈ ವಿಷಯ ಅಥವಾ ಸಂಬಂಧಿತ ನಿರೂಪಣೆಗಳನ್ನು ಪ್ರಸಾರ ಮಾಡುತ್ತಿರುವ ಎಲ್ಲಾ ಮಾಧ್ಯಮ ವೇದಿಕೆಗಳು, ಪ್ರಭಾವಿಗಳು ಮತ್ತು ವ್ಯಕ್ತಿಗಳು ಅವುಗಳನ್ನು ತಕ್ಷಣವೇ ತೆಗೆದುಹಾಕುವಂತೆ ನಾನು ವಿನಂತಿಸುತ್ತೇನೆ. ಈ ಹೇಳಿಕೆಯ ಸಮಯದಿಂದ ನಿಮಗೆ 24 ಗಂಟೆಗಳ ಕಾಲಾವಕಾಶವಿದೆ. ಇದು ವಿಫಲವಾದರೆ, ಸೂಕ್ತ ಕಾನೂನು ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement