ಐಸಿಸ್ ಸಂಚು ಪ್ರಕರಣ : ಕರ್ನಾಟಕದ 9 ಜನರ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ

ನವದೆಹಲಿ : ಜಾಗತಿಕ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕರ್ನಾಟಕದ ಒಂಬತ್ತು ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ಮೊದಲ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ.
ಫೆಡರಲ್ ಏಜೆನ್ಸಿ ಪ್ರಕಾರ, ಚಾರ್ಜ್ ಶೀಟ್‌ನಲ್ಲಿರುವ ಐವರು ಆರೋಪಿಗಳು ತಂತ್ರಜ್ಞಾನದ (ಟೆಕ್‌) ಹಿನ್ನೆಲೆ ಹೊಂದಿದ್ದಾರೆ. ಭಯೋತ್ಪಾದಕ ಗುಂಪಿನ ಕಾರ್ಯಸೂಚಿಯ ಮುಂದುವರಿಕೆಗಾಗಿ ದೇಶದಲ್ಲಿ ದಾಳಿಗಳನ್ನು ನಡೆಸುವ ಕೌಶಲ್ಯಗಳನ್ನು ಪಡೆದುಕೊಳ್ಳಲು ರೊಬೊಟಿಕ್ಸ್‌ನಲ್ಲಿ ಕೋರ್ಸ್‌ಗಳನ್ನು ಮಾಡುವಂತೆ ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್‌ನಿಂದ ನಿರ್ದೇಶನ ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಮೊಹಮ್ಮದ್ ಶಾರಿಕ್ (25), ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹ್ಮದ್ ಕೆ ಎ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27) ಎಂಬ 9 ಆರೋಪಿಗಳ ಮೇಲೆ ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿದೆ
ಇವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ವಿನಾಶ ಮತ್ತು ಆಸ್ತಿ ಹಾನಿ ತಡೆ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಅಹ್ಮದ್ ಮತ್ತು ಸೈಯದ್ ಯಾಸಿನ್ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿತ್ತು. ಮತ್ತು ಈಗ ಅವರ ವಿರುದ್ಧ ಇತರ ಅಪರಾಧಗಳ ಆರೋಪ ಹೊರಿಸಲಾಗಿದೆ ಎಂದು ಎನ್‌ಐಎ ಹೇಳಿದೆ. ಅವರಿಬ್ಬರು ರೀಶಾನ್ ತಾಜುದ್ದೀನ್ ಶೇಖ್, ಮಜಿನ್ ಅಬ್ದುಲ್ ರಹಮಾನ್ ಮತ್ತು ನದೀಮ್ ಅಹ್ಮದ್ ಕೆ.ಎ. ಅವರೊಂದಿಗೆ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್‌ನಿಂದ ಟಾಸ್ಕ್
“ಭಾರತದಲ್ಲಿ ಐಎಸ್ (ಇಸ್ಲಾಮಿಕ್ ಸ್ಟೇಟ್) ಅಜೆಂಟಾ ಮುಂದುವರಿಸಲು ಭಯೋತ್ಪಾದಕ ದಾಳಿಗಳನ್ನು ನಡೆಸಲು ಬೇಕಾದ ಕೌಶಲ್ಯಗಳನ್ನು ಪಡೆದುಕೊಳ್ಳಲು ರೋಬೋಟಿಕ್ಸ್ ಕೋರ್ಸ್‌ಗಳನ್ನು ಮಾಡುವಂತೆ ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್‌ ಅವರಿಗೆ ಸೂಚನೆ ನೀಡಿದ್ದ” ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿದೆ.
ಶಾರಿಕ್, ಮುನೀರ್ ಮತ್ತು ಯಾಸಿನ್ ಇಸ್ಲಾಮಿಕ್ ಸ್ಟೇಟ್ ಎಂದೂ ಕರೆಯಲ್ಪಡುವ ಭಯೋತ್ಪಾದಕ ಗುಂಪಿನ ನಿರ್ದೇಶನದ ಮೇರೆಗೆ ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಉತ್ತೇಜಿಸಲು ವಿದೇಶದಲ್ಲಿರುವ ಐಎಸ್ ಕಾರ್ಯಕರ್ತರೊಂದಿಗೆ ಶಾಮೀಲಾಗಿ ಕ್ರಿಮಿನಲ್ ಸಂಚು ರೂಪಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಕ್ರಿಪ್ಟೋಕರೆನ್ಸಿಗಳ ಮೂಲಕ ಆರೋಪಿಗಳಿಗೆ ಹಣ
ದೇಶದ ಭದ್ರತೆ, ಏಕತೆ ಮತ್ತು ಸಾರ್ವಭೌಮತೆಗೆ ಭಂಗ ತರುವ ಉದ್ದೇಶದಿಂದ ಈ ಮೂವರು ಸಕ್ರಿಯವಾಗಿ ಆಮೂಲಾಗ್ರವಾಗಿ ಸೇರಿ ಆರೋಪಿಗಳನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಎನ್‌ಐಎ ತಿಳಿಸಿದೆ. ಆನ್‌ಲೈನ್ ಹ್ಯಾಂಡ್ಲರ್ ಕ್ರಿಪ್ಟೋಕರೆನ್ಸಿಗಳ ಮೂಲಕ ಆರೋಪಿಗಳಿಗೆ ಹಣ ನೀಡಿದ್ದಾನೆ ಎಂದು ಅದು ಹೇಳಿದೆ. ಕಳೆದ ವರ್ಷ ಸೆಪ್ಟೆಂಬರ್ 19 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರಂಭದಲ್ಲಿ ಪ್ರಕರಣವನ್ನು ದಾಖಲಿಸಿದ್ದರು ಮತ್ತು ನಂತರ ಎನ್‌ಐಎ ಕೈಗೆತ್ತಿಕೊಂಡು ನವೆಂಬರ್ 15 ರಂದು ಪುನಃ ಪ್ರಕರಣ ದಾಖಲಿಸಿತ್ತು. ಎನ್‌ಐಎ ಪ್ರಕಾರ, ಆರೋಪಿಗಳು ಐಸಿಸ್ ಜೊತೆಗೂಡಿ ಶಿವಮೊಗ್ಗದಲ್ಲಿ ಐಇಡಿ ಟ್ರಯಲ್ ಬ್ಲಾಸ್ಟ್ (Trial Blast) ಮಾಡಿದ್ದರು.ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್‌ಐಎ ತಿಳಿಸಿದೆ.

ಪ್ರಮುಖ ಸುದ್ದಿ :-   ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ, ಸುಳ್ಳು ಪ್ರಕರಣ ದಾಖಲು : ಬಂಧನದ ನಂತರ ರೇವಣ್ಣ ಮೊದಲ ಪ್ರತಿಕ್ರಿಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement