ಸಿಡಿ ಪ್ರಕರಣ: ಎಸ್‌ಐಟಿಗೆ ಲಿಖಿತ ಹೇಳಿಕೆ ನೀಡಿದ ಕಲ್ಲಹಳ್ಳಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ “ದೂರು ವೃತ್ತಾಂತ”ದ ಬಗ್ಗೆ ಎಸ್‌ಐಟಿಗೆ ಮೂರು ಪುಟಗಳ ಹೇಳಿಕೆ ನೀಡಿದ್ದಾರೆ.
ಮಾ. 2ರಂದು ದಿನೇಶ್ ಕಲ್ಲಹಳ್ಳಿ ಜನ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅವರಿಗೆ ದೂರು ನೀಡಿದ್ದರು. ದೂರು ದಾಖಲು ಮೊದಲೇ ಅಶ್ಲೀಲ ಸಿಡಿ ಸ್ಪೋಟಗೊಂಡಿತ್ತು.ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಕಲ್ಲಹಳ್ಳಿ, ಸಂತ್ರಸ್ತ ಯುವತಿಗೆ ನ್ಯಾಯ ಕೊಡಿ ಎಂದು ಕೋರಿದ್ದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ “ಇದೊಂದು ರಾಜಕೀಯ ಷಡ್ಯಂತ್ರ” ಎಂದು ಆರೋಪಿಸಿದ್ದರು.
ದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡ ನಂತರ ದಿನೇಶ್ ಕಲ್ಲಹಳ್ಳಿ ದಿಢೀರ್‌ ಆಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ್ದ ದೂರನ್ನು ವಾಪಸು ಪಡೆದಿದ್ದರು.
ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಆರಂಭಿಸುತ್ತಿದ್ದಂತೆ ಜಾರಕಿಹೊಳಿ ಪ್ರಕರಣ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ತನಿಖೆ ನಡೆಸುತ್ತಿರುವ ಎಸ್‌ಐಟಿಯು ದೂರು ನೀಡಿದ ಬಗ್ಗೆ ಹೇಳಿಕೆ ನೀಡುವಂತೆ ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್‌ಗೆ ಮೂರು ಪುಟಗಳ ಉತ್ತರ ನೀಡಿರುವ ದಿನೇಶ್ ಕಲ್ಲಹಳ್ಳಿ, ಎಸ್‌ಐಟಿ ವಶದಲ್ಲಿರುವ ಪತ್ರಕರ್ತ ನನಗೆ ಮೊದಲಿನಿಂದಲೂ ಪರಿಚಯವಿದ್ದ. ಆತನ ಗೆಳತಿಯೂ ನನಗೆ ಮೊದಲಿನಿಂದಲೂ ಗೊತ್ತಿರುವವರೇ. ಹೀಗಾಗಿ ದೂರು ಕೊಡುವ ಬಗ್ಗೆ ಹೇಳಿದರು. ಯುವತಿಗೆ ಜೀವ ಭಯವಿದೆ. ನೀವು ಸಾಮಾಜಿಕ ಜೀವನದಲ್ಲಿರುವರು. ನೀವು ದೂರು ಕೊಟ್ಟರೆ ಯುವತಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು. ಹೀಗಾಗಿ ನಾನು ದೂರು ಕೊಟ್ಟೆ . ಆದರೆ ಆ ಯುವತಿಯಾಗಲೀ ನನಗಾಗಲೀ ಯಾವ ಪರಚಯವೂ ಇಲ್ಲ. ರಾಜ್ಯದ ಜನರು ನನ್ನನ್ನು ಅನುಮಾನದಿಂದ ನೋಡುವಂತಾಗಿದ್ದರಿಂದ ನಾನು ದೂರು ವಾಪಸು ಪಡೆದಿದ್ದೇನೆ. ಆದರೆ, ಇದರ ಹಿಂದೆ ಷಡ್ಯಂತ್ರ, ಹನಿಟ್ರ್ಯಾಪ್ ಕುರಿತ ಯಾವ ವಿವರಗಳು ನನಗೆ ಲಭ್ಯ ಇರಲಿಲ್ಲ. ಸಿಡಿ ಸ್ಪೋಟಿಸುವ ಕುರಿತ ಪರಿಚಿತ ಯುವಕ ಎರಡು ದಿನ ಪದೇ ಪದೇ ಪೋನ್ ಕರೆ ಮಾಡುತ್ತಿದ್ದ. ರಿಲೀಸ್ ಆದ ಬಳಿಕವೂ ನನ್ನ ಜತೆ ಸಹಜವಾಗಿ ಎರಡು ದಿನ ಮಾತನಾಡಿದ್ದ ಎಂದು ಕಲ್ಲಹಳ್ಳಿ ಎಸ್‌ಐಟಿಗೆ ಸಲ್ಲಿಸಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement