ಶಿಕ್ಷಕಿಯರಿಗೆ ಜೀನ್ಸ್, ಬಿಗಿಯುಡುಗೆ, ಶಿಕ್ಷಕರಿಗೆ ಟೀ ಶರ್ಟ್ ನಿಷೇಧಿಸಿದ ಪಾಕ್

ಇಸ್ಲಾಮಾಬಾದ್: ಮಹಿಳಾ ಶಿಕ್ಷಕರು ಜೀನ್ಸ್ ಮತ್ತು ಬಿಗಿಯುಡುಗೆ ಧರಿಸಬಾರದು ಎಂದು ಪಾಕಿಸ್ತಾನದ ಫೆಡರಲ್ ಡೈರೆಕ್ಟರೇಟ್ ಆಫ್ ಎಜುಕೇಷನ್(ಎಫ್‌ಡಿಇ) ಸೂಚಿಸಿದೆ.
ಬೋಧನಾ ವರ್ಗದವರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿರುವ ಎಫ್‌ಡಿಇ, ಪುರುಷ ಶಿಕ್ಷಕರೂ ಜೀನ್ಸ್ ಮತ್ತು ಟಿ-ಶರ್ಟ್ಸ್ ಧರಿಸಬಾರದು ಎಂದು ಎಫ್‌ಡಿಇ ಸೂಚಿಸಿದೆ. ಶಿಕ್ಷಕಿಯರು ಸರಳ ಮತ್ತು ಸಭ್ಯ ರೀತಿಯ ಸಲ್ವಾರ್ ಕಮೀಝ್, ಷರಾಯಿ(ಟ್ರೌಸರ್), ದುಪಟ್ಟಾ/ಶಾಲು ಸಹಿತ ಶರ್ಟ್ಸ್ ಧರಿಸಬೇಕು. ಶಿಕ್ಷಕರು ಸಲ್ವಾರ್ ಕಮೀಝ್‌ನ ಜೊತೆ ವೈಸ್ಟ್‌ಕೋಟ್, ಪ್ಯಾಂಟ್ ಮತ್ತು ಶರ್ಟ್, ಜೊತೆಗೆ ಟೈ ಧರಿಸುವುದು ಕಡ್ಡಾಯ. ಯಾವುದೇ ರೀತಿಯ ಟಿ-ಶರ್ಟ್ಸ್‌ ನಿಷೇಧಿಸಲಾಗಿದೆ. ತರಗತಿ ಮತ್ತು ಪ್ರಯೋಗಾಲಯಗಳಲ್ಲಿರುವಾಗ ಶಿಕ್ಷಕ/ಶಿಕ್ಷಕಿಯರು ಬೋಧನಾ ನಿಲುವಂಗಿ ಧರಿಸಬೇಕು. ಶಿಕ್ಷಣ ಸಂಸ್ಥೆಗಳ ದ್ವಾರಪಾಲಕ ಮತ್ತು ಬೋಧಕೇತರ ಸಿಬಂದಿಗಳಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು. ಶಾಲೆಗಳ ಮುಖ್ಯಶಿಕ್ಷಕರು, ಪ್ರಾಂಶುಪಾಲರು ಈ ವಸ್ತ್ರಸಂಹಿತೆಯ ಸಮರ್ಪಕ ಜಾರಿ ಮತ್ತು ಪಾಲನೆಯನ್ನು ಖಾತರಿಪಡಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement