ಎಚ್‌ಎಎಲ್‌ನಿಂದ ಮೊದಲ ಎಲ್‌ಸಿಎ ತೇಜಸ್ ತರಬೇತು ವಿಮಾನ ಸ್ವೀಕರಿಸಿದ ಭಾರತೀಯ ವಾಯುಪಡೆ

ಭಾರತೀಯ ವಾಯುಪಡೆಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿಂದ ಮೊದಲ ಎಲ್‌ಸಿಎ (LCA) ತೇಜಸ್ ತರಬೇತುದಾರ ವಿಮಾನವನ್ನು ಬುಧವಾರ ಸ್ವೀಕರಿಸಿದೆ.
LCA ತೇಜಸ್ ಅವಳಿ ಆಸನವುಳ್ಳ ಹಗುರವಾದ, ಎಲ್ಲಾ ಹವಾಮಾನದ ಬಹು-ಪಾತ್ರದ 4.5 ಪೀಳಿಗೆಯ ವಿಮಾನವಾಗಿದೆ. ಈ ದಿನವನ್ನು ಐತಿಹಾಸಿಕ ಎಂದು ಕರೆದ ಎಚ್‌ಎಎಲ್, ಅಂತಹ ವಿಮಾನ ತಯಾರಿಸಿದ ಮತ್ತು ತಮ್ಮ ರಕ್ಷಣಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ “ಅತ್ಯಂತ ಕಡಿಮೆ” ಗಣ್ಯ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸುತ್ತದೆ ಎಂದು ಹೇಳಿದೆ.

ಎಚ್‌ಎಎಲ್ ಐಎಎಫ್‌ನಿಂದ 18 ಅವಳಿ ಆಸನಗಳ ವಿಮಾನಕ್ಕೆ ಆರ್ಡ್‌ ಪಡೆದಿದೆ. ಮತ್ತು 2023-24ರ ಅವಧಿಯಲ್ಲಿ ಅವುಗಳಲ್ಲಿ ಎಂಟನ್ನು ವಿತರಿಸಲು ಯೋಜಿಸುತ್ತಿದೆ. ಉಳಿದ 10 ಅನ್ನು 2026-27ರ ವೇಳೆಗೆ ಹಂತಹಂತವಾಗಿ ವಿತರಿಸಲಾಗುತ್ತದೆ. “ಈ ಐತಿಹಾಸಿಕ ಘಟನೆಯು LCA ಅವಳಿ ಆಸನವನ್ನು ಹಗುರ ತರಬೇತಿ ಯುದ್ಧ ವಿಮಾನ ಉತ್ಪಾದಿಸುವ ಪ್ರಮುಖ ಮೈಲಿಗಲ್ಲಿನ ಸಾಧನೆಯನ್ನು ಗುರುತಿಸುತ್ತದೆ ಎಂದು HAL ಹೇಳಿದೆ.

ಈ ತೇಜಸ್ ತರಬೇತುದಾರ ವಿಮಾನದ ಬಗ್ಗೆ ವಿವರಿಸುತ್ತಾ, ಐಎಎಫ್‌ (IAF) ಇದು ಸಮಕಾಲೀನ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನಗಳ ಸಮ್ಮಿಲನವಾಗಿದೆ, ಉದಾಹರಣೆಗೆ ಕ್ವಾಡ್ರಾಪ್ಲೆಕ್ಸ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್, ಸುಧಾರಿತ ಗಾಜಿನ ಕಾಕ್‌ಪಿಟ್, ಸಂಯೋಜಿತ ಡಿಜಿಟಲ್ ಏವಿಯಾನಿಕ್ಸ್ ವ್ಯವಸ್ಥೆಗಳು ಮತ್ತು ಏರ್‌ಫ್ರೇಮ್‌ಗಾಗಿ ಸುಧಾರಿತ ಸಂಯೋಜಿತ ವಸ್ತುಗಳು ಇದರಲ್ಲಿವೆ ಎಂದು ಹೇಳಿದ್ದಾರೆ.
ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈ ಸಮಾರಂಭದಲ್ಲಿ ಎಲ್ ಸಿಎ ಅವಳಿ ಸೀಟರ್ ಅನಾವರಣ, ಸೇವೆಗೆ ಬಿಡುಗಡೆ (ಆರ್ ಎಸ್ ಡಿ), ಸಿಗ್ನಲಿಂಗ್ ಔಟ್ ಸರ್ಟಿಫಿಕೇಟ್ (ಎಸ್ ಒಸಿ) ಹಸ್ತಾಂತರ ಸಮಾರಂಭ ಏರ್ ಸ್ಟಾಫ್ ಮುಖ್ಯಸ್ಥರ ಸಮ್ಮುಖದಲ್ಲಿ ನಡೆಯಿತು. ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹಾಗೂ ಇತರರಿದ್ದರು.

ಪ್ರಮುಖ ಸುದ್ದಿ :-   ಗರ್ಭಧಾರಣೆ ಕುರಿತ ಪುಸ್ತಕದಲ್ಲಿ 'ಬೈಬಲ್' ಪದ ಬಳಕೆ: ನಟಿ ಕರೀನಾ ಕಪೂರಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement