ಕಲಬುರಗಿ : ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಲಾಯಿಸಿದ ಚಾಲಕ ; ವಿಡಿಯೋ ವೈರಲ್‌

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ಕ್ಕೆ ಸೇರಿದ ಬಸ್ ಒಂದು ಹೆಡ್‌ಲೈಟ್‌ಗಳು ಸರಿಯಾಗಿಲ್ಲದೆ ಸಂಚರಿಸಿದ್ದು, ರಸ್ತೆ ಕಾಣುವಂತೆ ಮಾಡಲು ಬಸ್‌ ಕಂಡಕ್ಟರ್‌ ತೋರಿಸಿದ ಮೊಬೈಲ್ ಫೋನ್‌ನ ಟಾರ್ಚ್ ಬೆಳಕಿನಲ್ಲಿ ಚಾಲಕ್‌ ಬಸ್‌ ಓಡಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಕಲಬುರಗಿ ನಗರದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಚಿಂಚೋಳಿ ಪಟ್ಟಣಕ್ಕೆ ತೆರಳುತ್ತಿದ್ದ ದಿನದ ಕೊನೆಯ ಬಸ್ ಸೇವೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ, ಕತ್ತಲೆಯ ರಸ್ತೆಯಲ್ಲಿ ಹೆಡ್‌ಲೈಟ್‌ಗಳಿಲ್ಲದೇ ಬಸ್ ಚಾಲನೆ ಮಾಡುತ್ತಿರುವುದು ಕಂಡುಬಂದಿದ್ದು, ಚಾಲಕನಿಗೆ ರಸ್ತೆ ಕಾಣುವಂತೆ ಮಾಡಲು ಬಸ್‌ ಕಂಡಕ್ಟರ್‌ ತಮ್ಮ ಮೊಬೈಲ್ ಫೋನ್‌ನ ಟಾರ್ಚ್ ಬೆಳಕಿನಲ್ಲಿ ರಸ್ತೆ ತೋರಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ.
ರಾತ್ರಿ 7:30ಕ್ಕೆ ಕಲಬುರಗಿಯಿಂದ ಹೊರಟ ಬಸ್ ತಡರಾತ್ರಿ ಚಿಂಚೋಳಿ ತಲುಪಿತು. ಬಸ್ಸಿನಲ್ಲಿ 8 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ.

ಪ್ರಯಾಣದ ಯಾವಾಗಿನಿಂದ ಬಸ್‌ನ ಹೆಡ್‌ಲೈಟ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಅಪಾಯಕರ ಪರಿಸ್ಥಿತಿಯ ನಡುವೆಯೇ ಪ್ರಯಾಣಿಕರು ಬೇರೆ ಯಾವುದೇ ಪರ್ಯಾಯವಿಲ್ಲದೆ ತಮ್ಮ ಪ್ರಯಾಣವನ್ನು ಮುಂದುವರಿಸಬೇಕಾದ ಪರಿಸ್ಥಿತಿ ಎದುರಾಯಿತು.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮತ್ತಷ್ಟು ಜೋರು ; 4 ದಿನ ಭಾರೀ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement