ರಾಜ್ಯಸಭೆ: ರೈತ ಹೋರಾಟದ ಚರ್ಚೆಗೆ ವಿಪಕ್ಷಗಳ ಪಟ್ಟು

ನವ ದೆಹಲಿ: ಮೂರು ಹೊಸ ಕೃಷಿ ಮಸೂದೆಗಳ ಬಗ್ಗೆ ರೈತರು ನಡೆಸುತ್ತಿರುವ  ಪ್ರತಿಭಟನೆ ಕುರಿತು ಚರ್ಚೆ ಕೈಗೊಳ್ಳುವಂತೆ  ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮಂಗಳವಾರ  ರಾಜ್ಯಸಭೆಯಲ್ಲಿ ತೀವ್ರವಾಗಿ ಒತ್ತಾಯಿಸಿದ್ದರಿಂದ    ರಾಜ್ಯಸಭಾ ಕಲಾಪ  ಮುಂದೂಡಲಾಗಿದೆ.

ಬೆಳಿಗ್ಗೆ 10: 30 ರ ವರೆಗೆ ಸದನವನ್ನು ಮೊದಲು ಸುಮಾರು 10 ನಿಮಿಷಗಳ ಕಾಲ ಮುಂದೂಡಲಾಯಿತು.

ಸದನವು ಮತ್ತೆ ಸಭೆ ಸೇರಿದ ಕೂಡಲೇ, ವಿರೋಧ ಪಕ್ಷಗಳು ಚರ್ಚೆಗೆ ಮತ್ತೆ ಪಟ್ಟು ಹಿಡಿದಿದ್ದರಿಂದ  ಬೆಳಿಗ್ಗೆ 11: 30 ರವರೆಗೆ ಮತ್ತೊಮ್ಮೆ ಮುಂದೂಡಲಾಯಿತು.

ಬೆಳಿಗ್ಗೆ 11.30 ಕ್ಕೆ ಮೇಲ್ಮನೆ ಮರು ಸೇರ್ಪಡೆಗೊಂಡಾಗ,  ಪ್ರತಿಭಟನಾಕಾರರು ಸಭಾಪತಿಗಳ ಮುಂದಿನ ಬಾವಿಯಲ್ಲಿ ಸೇರು ಪ್ರತಿಭಟನೆ ಮುಂದುವರಿಸಿದರು.  ಸಭಾಧ್ಯಕ್ಷರು  ಕೋವಿಡ್‌-19 ಪ್ರೋಟೋಕಾಲ್‌ಗಳನ್ನು ಅನುಸರಿಸುವಂತೆ ಪ್ರತಿಪಕ್ಷದ ಸದಸ್ಯರಿಗೆ ಮನವಿ ಮಾಡಿದರು.ಆದರೆ, ಮನವಿಗೆ  ಕಿವಿಗೊಡಲಿಲ್ಲ.

ಕಾಂಗ್ರೆಸ್, ಎಡ, ಟಿಎಂಸಿ, ಡಿಎಂಕೆ ಮತ್ತು ಆರ್‌ಜೆಡಿ ಸದಸ್ಯರು ರೈತರು ನಡೆಸುತ್ತಿರುವ  ಪ್ರತಿಭಟನೆ ಕುರಿತು ಚರ್ಚೆ  ಕೈಗೆತ್ತಿಕೊಳ್ಳಲು ಪಟ್ಟು ಹಿಡಿದರು.  ಅಧ್ಯಕ್ಷರು ಬೇಡಿಕೆಯನ್ನು ತಿರಸ್ಕರಿಸಿದರು.

ಪ್ರತಿಪಕ್ಷದ ಸದಸ್ಯರು  ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ನಿರತ ಸದಸ್ಯರು ಘೋಷಣೆ ಮುಂದುವರಿಸುತ್ತಿದ್ದಂತೆ, ವೆಂಕಯ್ಯ ನಾಯ್ಡು  ಅವರು ಸದಸ್ಯರಿಗೆ ತಮ್ಮ ಸ್ಥಾನಗಳಿಗೆ ಮರಳುವಂತೆ ಸೂಚಿಸಿದರು. ಆದರೂ ಪ್ರತಿಪಕ್ಷದ ಸದಸ್ಯರು ಕೇಳಲಿಲ್ಲ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

ಸರ್ಕಾರ ಮತ್ತು ರೈತರ ನಡುವೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸದನಕ್ಕೆ ತಿಳಿದಿಲ್ಲ ಮತ್ತು ಸದನವು ಈ ವಿಷಯದ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಬೇಕು ಎಂದು ಸುಖೇಂಡು ಶೇಖರ್ ರಾಯ್ (ಟಿಎಂಸಿ) ಹೇಳಿದರು.

“ನಾವು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಚರ್ಚೆಯನ್ನು ಬಯಸುತ್ತೇವೆ” ಎಂದು ಅವರು ಹೇಳಿದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement