ಅಫ್ಘಾನ್‌ ಬಿಕ್ಕಟ್ಟು: ಭಾರತದ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತುಸಭೆ, ಭಯೋತ್ಪಾದನೆ ಬಗ್ಗೆ ಆತಂಕ

ನ್ಯೂಯಾರ್ಕ್​: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಂದ ಅಸ್ಥಿರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಸೋಮವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತುಸಭೆ ನಡೆಯಿತು.
ವಿಶ್ವಸಂಸ್ಥೆಯಲ್ಲಿರುವ ಭಾರತದ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಯೋತ್ಪಾದನೆ ಮತ್ತು ಅದರ ಯಾವುದೇ ಮುಖದ ಬಗ್ಗೆ ಕಿಂಚಿತ್ತೂ ಸಹನೆ ಇರಿಸಿಕೊಳ್ಳುವುದಿಲ್ಲ ಎನ್ನುವುದು ನಿಜವೇ ಆಗಿದ್ದರೆ ಅಫ್ಘಾನಿಸ್ತಾನ ಭೂಪ್ರದೇಶವನ್ನು ಯಾವುದೇ ಭಯೋತ್ಪಾದಕ ಸಂಘಟನೆಯು ಬಳಸಿಕೊಳ್ಳಲು ಅವಕಾಶ ನೀಡಬಾರದು. ಇತರ ಯಾವುದೇ ದೇಶಗಳ ವಿರುದ್ಧ ಉಗ್ರಗಾಮಿ ಕಾರ್ಯಾಚರಣೆ ನಡೆಸಲು ಅಫ್ಘನ್ ನೆಲವನ್ನು ಬಳಸಿಕೊಳ್ಳಲು ಅವಕಾಶ ಕೊಡಬಾರದು. ಆಗ ಮಾತ್ರ ಅಫ್ಘಾನಿಸ್ತಾನದ ನೆರೆಹೊರೆಯ ದೇಶಗಳು ಸುರಕ್ಷಿತ ಭಾವನೆ ಹೊಂದುತ್ತವೆ ಎಂದು ತಿರುಮೂರ್ತಿ ಹೇಳಿದ್ದಾರೆ.
ಕಾಬೂಲ್​ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಷಾದಕರ ದೃಶ್ಯಗಳು ಕಂಡುಬಂದವು. ಜನರಲ್ಲಿ ಭೀತಿ ಆವರಿಸಿಕೊಂಡಿದೆ. ಮಹಿಳೆಯರು ಮತ್ತು ಮಕ್ಕಳು ಹೆದರಿದ್ದಾರೆ. ಕಾಬೂಲ್​ನ ವಿಮಾನ ನಿಲ್ದಾಣವೂ ಸೇರಿದಂತೆ ನಗರದ ಹಲವೆಡೆ ಗುಂಡು ಹಾರಾಟ ವರದಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಫ್ಘಾನಿಸ್ತಾನದ ನೆರೆಯ ದೇಶವಾಗಿ, ಅಲ್ಲಿನ ಜನರ ಮಿತ್ರ ರಾಷ್ಟ್ರವಾಗಿ ಭಾರತಕ್ಕೆ ಅಲ್ಲಿನ ಪರಿಸ್ಥಿತಿ ಆತಂಕ ಉಂಟು ಮಾಡಿದೆ. ಅಫ್ಘಾನಿಸ್ತಾನದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸದಾ ಭಯದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಅಫ್ಘಾನಿಸ್ತಾನದ ನೆರೆಯ ದೇಶವಾಗಿ, ಅಲ್ಲಿನ ಜನರ ಮಿತ್ರ ರಾಷ್ಟ್ರವಾಗಿ ಭಾರತಕ್ಕೆ ಅಲ್ಲಿನ ಪರಿಸ್ಥಿತಿ ಆತಂಕ ಉಂಟು ಮಾಡಿದೆ. ಅಫ್ಘಾನಿಸ್ತಾನದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸದಾ ಭಯದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. .
ಅಫ್ಘಾನಿಸ್ತಾನವು ಎಂದಿಗೂ ಉಗ್ರರ ವೇದಿಕೆಯಾಗಬಾರದು. ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನವು ಭಯೋತ್ಪಾದಕರ ನೆಲೆವೀಡಾಗುವ ಅಪಾಯವಿದೆ. ಇದರ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಒಂದಾಗಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಹೇಳಿದರು

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement