ಉತ್ತರ ಪ್ರದೇಶ ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿ ಸತತ ಗೆಲುವು : 2017ರ ಚುನಾವಣೆಗಿಂತ ಹೆಚ್ಚು ಮತಗಳನ್ನು ಪಡೆದ ಬಿಜೆಪಿ..!

ಲಕ್ನೋ: ಬಿಜೆಪಿ ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿವುದರೊಂದಿಗೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮರಳಲಿದ್ದಾರೆ – ಭಾರತದ ಅತ್ಯಂತ ರಾಜಕೀಯವಾಗಿ ಪ್ರಮುಖ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಆಡಳಿತಾರೂಢ ಪಕ್ಷ ಅಧಿಕಾರಕ್ಕೆ ಬುರುವುದು 37 ವರ್ಷಗಳಲ್ಲಿ ಇದೇ ಮೊದಲನೆಯದು, ಜೊತೆಗೆ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಕಳೆದ ಚುನಾವಣೆಗಿಂತ ಹೆಚ್ಚು ಮತಗಳನ್ನು ಪಡೆದಿರುವುದು ಎಣಿಕೆ ಸಂದರ್ಭದಲ್ಲಿ ಗೊತ್ತಾಗಿದೆ.
ಈ ಸಲದ ಚುನಾವಣೆಯಲ್ಲಿ ಈವರೆಗೆ ದೊರಕಿದ ಮಾಹಿತಿ ಪ್ರಕಾರ, ಚಲಾವಣೆಯಾದ ಮತಗಳಲ್ಲಿ ಬಿಜೆಪಿ 44.6 %ರಷ್ಟು ಮತಗಳನ್ನು ಗಳಿಸಿದೆ – ಇದು 2017 ರ ಚುನಾವಣೆಯಲ್ಲಿ ಪಡೆದ ಮತಗಳಿಗಿಂತ ಶೇಕಡಾ 5 ರಷ್ಟು ಹೆಚ್ಚಾಗಿದೆ.

ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಸರಿಸುಮಾರು ಅರ್ಧದಷ್ಟು ಸ್ಥಾನಗಳೊಂದಿಗೆ ಬಿಜೆಪಿಗಿಂತ ಹಿಂದುಳಿದಿದೆ, ಇದು ಪಕ್ಷದ ನಿರೀಕ್ಷೆಗಿಂತ ತೀರಾ ಕಡಿಮೆಯಾಗಿದೆ.
ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಕಾಂಗ್ರೆಸ್ ಕ್ರಮವಾಗಿ ಐದು ಮತ್ತು ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಅಪ್ನಾ ದಳ (ಸೋನೆಲಾಲ್) 11 ಸ್ಥಾನಗಳಲ್ಲಿ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಗೋರಖ್‌ಪುರ ನಗರದಿಂದ ಯೋಗಿ ಆದಿತ್ಯನಾಥ್, ಕರ್ಹಾಲ್‌ನಿಂದ ಅಖಿಲೇಶ್ ಯಾದವ್, ಜಸ್ವಂತ್ ನಗರದಿಂದ ಅವರ ಪಕ್ಷದ ಶಿವಪಾಲ್ ಯಾದವ್ ಮತ್ತು ರಾಮ್‌ಪುರ ಖಾಸ್‌ನಿಂದ (ಪ್ರತಾಪ್‌ಗಢ) ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆರಾಧನಾ ಶುಕ್ಲಾ ಗೆದ್ದವರಲ್ಲಿ ಪ್ರಮುಖರು.

ಪ್ರಮುಖ ಸುದ್ದಿ :-   ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ...?

ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಆದಿತ್ಯನಾಥ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಸುಭಾವತಿ ಶುಕ್ಲಾ ಅವರಿಗಿಂತ ಸುಮಾರು 51,974 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಸಿರತು ಕ್ಷೇತ್ರದಿಂದ 82 ಮತಗಳಿಂದ ಹಿನ್ನಡೆಯಲ್ಲಿದ್ದರೆ, ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಅವರು ಫಾಜಿಲ್ ನಗರ ಕ್ಷೇತ್ರದಿಂದ ಹಿನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ತುಮಕುಹಿ ರಾಜ್‌ಗಿಂತ ಹಿಂದುಳಿದಿದ್ದಾರೆ.
80 ಸಂಸದೀಯ ಸ್ಥಾನಗಳೊಂದಿಗೆ, ಉತ್ತರ ಪ್ರದೇಶವು ಕೇಂದ್ರದಲ್ಲಿ ಅಧಿಕಾರದ ಕೀಲಿಯನ್ನು ಹೊಂದಿದೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ರಾಷ್ಟ್ರೀಯ ಮನಸ್ಥಿತಿಗೆ ಇದು ಸುಳಿವು ನೀಡುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಭಾರತದ 135 ಕೋಟಿ ಜನರಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಜನರಿಗೆ ನೆಲೆಯಾಗಿರುವ ಉತ್ತರ ಪ್ರದೇಶ ಸಂಸತ್ತಿಗೆ ಹೆಚ್ಚು ಜನರನ್ನು ಕಳುಹಿಸುತ್ತದೆ.

 

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement