ಪ್ರಿಯಕರನ ಜೊತೆ ಮುನಿಸು, 80 ಅಡಿ ಎತ್ತರದ ಹೈ ಹೈಟೆನ್ಷನ್‌ ವಿದ್ಯುತ್ ಟವರ್ ಏರಿದ ಪ್ರೇಯಸಿ…!

ರಾಯಪುರ: ಪ್ರಿಯಕರನ ಜತೆ ಸಿಟ್ಟು ಮಾಡಿಕೊಂಡ ನಂತರ ಪ್ರೇಯಸಿ 80 ಅಡಿ ಎತ್ತರದ ವಿದ್ಯುತ್‌ ಟವರ್‌ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆ ಛತ್ತೀಸ್‌ಗಢದ ಗೌರೇಲಾ ಪೆಂಡ್ರಾ ಮಾರ್ವಾಹಿ ಜಿಲ್ಲೆಯಲ್ಲಿ ನಡೆದಿದೆ.
ಯುವತಿ ಕ್ಷುಲ್ಲಕ ಕಾರಣಕ್ಕೆ ಪ್ರಿಯತಮನ ಜತೆ ಜಗಳ ಮಾಡಿಕೊಂಡಿದ್ದಾಳೆ, ಇಬ್ಬರ ಮಧ್ಯೆ ಜಗಳದ ನಂತರ ಕೋಪಗೊಂಡ ಆಕೆ 80 ಅಡಿ ಎತ್ತರದ ವಿದ್ಯುತ್‌ ಹೈಟೆನ್ಷನ್‌ ಟವರ್‌ ಹತ್ತಿದ್ದಾಳೆ. ಟವರ್‌ ಏರಿದ ನಂತರ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ವಿಡಿಯೋ ವೈರಲ್‌ ಆಗಿದೆ. ಯುವತಿಯ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಪ್ರಿಯಕರ ಕ್ಷಮೆ ಕೇಳಿ ಕೆಳಗೆ ಇಳಿಯುವಂತೆ ಅಂಗಲಾಚುತ್ತಿದ್ದ. ಆಕೆ ಕೆಳಕ್ಕಿಳಿಯುವ ಸೂಚನೆ ಕಾಣಿಸದೆ ಇದ್ದಾಗ, ಆತನೂ ಅರ್ಧ ಟವರ್‌ ಹತ್ತಿ ಮನವೊಲಿಸುವ ಪ್ರಯತ್ನ ಮಾಡಿದ.

ಅವರಿಬ್ಬರೂ ಟವರ್‌ ಮೇಲೆ ಇರುವುದನ್ನು ಕಂಡ ಸ್ಥಳೀಯರು, ಪೆಂಡ್ರಾ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಇಬ್ಬರ ಮನೆಯವರಿಗೂ ಸುದ್ದಿ ಗೊತ್ತಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಟವರ್ ಬುಡದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿಕೊಂಡಿದ್ದರು. ಪೊಲೀಸರು ಮತ್ತು ಕುಟುಂಬದವರು ಇಬ್ಬರಿಗೂ ಕೆಳಗೆ ಇಳಿದು ಬರುವಂತೆ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಕೆಲವು ಗಂಟೆಗಳ ಪ್ರಯತ್ನದ ನಂತರ ನಂತರ ಪೊಲೀಸರು ಅವರಿಬ್ಬರ ಮನವೊಲಿಸುವಲ್ಲಿ ಯಶಸ್ವಿಯಾದರು.
ಫೋನ್‌ ಕಾಲ್‌ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಜಗಳವಾಗಿತ್ತು ಎಂಬುದು ಅನಂತರ ಪೊಲೀಸರಿಗೆ ತಿಳಿದಿದೆ. ಆಕೆ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಒತ್ತಡದ ನಂತರವೂ 'ಮೇಕ್ ಇನ್ ಇಂಡಿಯಾ' ಬದ್ಧತೆ ಪುನರುಚ್ಚರಿಸಿದ ಆಪಲ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement