ಪೊಲೀಸರು ಬಂದಿದ್ದು ನೋಡಿ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಶಂಕಿತ ಸರಗಳ್ಳ !

ಬೆಂಗಳೂರು: ಪೊಲೀಸರು ಬೆನ್ನಟ್ಟಿ ಬಂದಿದ್ದನ್ನು ನೋಡಿ ಶಂಕಿತ ಸರಗಳ್ಳ ಸೈನೈಡ್ ಸೇವಿಸಿ ಸಾವಿಗೀಡಾದ್ದಾನೆ. ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರಿಗೆ ಇದೀಗ ಸೈನೈಡ್ ಕಂಟಕ ಎದುರಾಗಿದೆ.
ಬೆಂಗಳೂರು ಹೊರವಲಯದ ಹೊಸಕೋಟೆ ಸಮೀಪ ಪಿಳ್ಳಂಗುಪ್ಪೆ ಕೈಗಾರಿಕ ಪ್ರದೇಶದಲ್ಲಿ ಸರಗಳ್ಳತನ ಪ್ರಕರಣದ ಶಂಕಿತ ಅರೋಪಿ ಶಂಕರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಕೆ.ಆರ್. ಪುರ ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರನ್ನು ನೋಡಿದ ಕೂಡಲೇ ಶಂಕರ್ ಸೈನೈಡ್ ಬಾಯಿಗೆ ಹಾಕಿಕೊಂಡಿದ್ದಾನೆ. ಕುಸಿದು ಬಿದ್ದ ಮದನಪಲ್ಲಿ ಮೂಲದ ಶಂಕರನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿದಿಲ್ಲ. ಇದೀಗ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ಶಂಕಿತ ಆರೋಪಿ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈನೈಡ್ ವಿಷ ಆರೋಪಿಗೆ ಹೇಗೆ ಸಿಕ್ಕಿತು ಎಂಬ ಬಗ್ಗೆ ವಿಧಿ ವಿಜ್ಞಾನ ತಂಡ ಪರಿಶೀಲನೆ ನಡೆಸುತ್ತಿದೆ.
ಇದಕ್ಕೂ ಮೊದಲು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಪೊಲೀಸರಿಂದ ಶಂಕಿತ ಆರೋಪಿ ಶಂಕರಬಂಧನಕ್ಕೆ ಒಳಗಾಗಿದ್ದ. ಜೈಲು ಸೇರಿದ್ದ ಬಳಿಕ ಬಿಡುಗಡೆಯಾಗಿದ್ದ. ಕಳೆದ ಎರಡು ತಿಂಗಳ ಹಿಂದೆ ವೈಟ್‌ಫೀಲ್ಡ್ ವಿಭಾಗದಲ್ಲಿ ಸರಣಿ ಸರಗಳ್ಳತನ ಪ್ರಕರಣ ವರದಿಯಾಗಿತ್ತು. ಈ ಪ್ರಕರಣಗಳ ವಿಚಾರಣೆ ಸಂಬಂಧ ಶಂಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಕೆ.ಆರ್. ಪುರಂ ಪೊಲೀಸರು ಬೆನ್ನು ಬಿದ್ದಿದ್ದರು. ಶಂಕಿತನ ಬಂಧನ ವೇಳೆ ಈ ದುರ್ಘಟನೆ ನಡೆದಿದ್ದು, ಇದೀಗ ಆರೋಪಿ ಯಾವುದೇ ಅಪರಾಧ ಪ್ರಕರಣದ ಹಿನ್ನೆಲೆ ಹೊಂದಿಲ್ಲದಿದ್ದರೆ ಬಂಧನಕ್ಕೆ ತೆರಳಿದ್ದ ಕೆ.ಆರ್. ಪುರಂ ಪೊಲೀಸರಿಗೆ ಸಂಕಷ್ಟ ಎದುರಾಗಲಿದೆ.
ಕೆ.ಆರ್. ಪುರಂ ಸುತ್ತಮುತ್ತ ನಡೆದಿದ್ದ ಸರಗಳ್ಳತನ ಪ್ರಕರಣದ ಆರೋಪಿಯ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯದಲ್ಲಿ ಕಾಣುವ ವ್ಯಕ್ತಿಗೂ ಶಂಕರ ಮುಖಕ್ಕೂ ಸಾಮ್ಯತೆ ಇರುವ ಕಾರಣ ಈತನ ಬೆನ್ನು ಬಿದ್ದಿದ್ದರು. ಈ ಕುರಿತು ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement