ಮೇ1ರಂದು ಸಾಹಿತಿ ಗಜಾನನ ಶರ್ಮರಿಗೆ ಹವ್ಯಕ ವಿಭೂಷಣ ಪ್ರಶಸ್ತಿ, ಬಳ್ಕೂರು ಕೃಷ್ಣ ಯಾಜಿ, ಉದಯಕುಮಾರ ನೂಜಿ, ನಾರಾಯಣದಾಸರಿಗೆ ಹವ್ಯಕ ಭೂಷಣ ಪ್ರಶಸ್ತಿ ಪ್ರದಾನ

ಬೆಂಗಳೂರು: ಬೆಂಗಳೂರಿನಲ್ಲಿರುವ ಅಖಿಲ ಹವ್ಯಕ ಮಹಾಸಭಾದ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ ಹಾಗೂ ಪಲ್ಲವ ಪುಸ್ಕಾರ ಪ್ರದಾನ ಸಮಾರಂಭ ಮಲ್ಲೇಶ್ವರಂನಲ್ಲಿರುವ ಹವ್ಯಕ ಭವನದಲ್ಲಿ ಮೇ 1ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಸಾಹಿತಿ ಡಾ. ಗಜಾನನ ಶರ್ಮ ಅವರಿಗೆ ಹವ್ಯಕ ವಿಭೂಷಣ ಪ್ರಶಸ್ತಿಯನ್ನು ಅಂದು ನೀಡಲಾಗುತ್ತದೆ. ಅಲ್ಲದೆ, ಹವ್ಯಕ ಭೂಷಣ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಕಲಾವಿದರಾದ ಬಳ್ಕೂರು ಕೃಷ್ಣ ಯಾಜಿ, ಸಮಾಜಸೇವೆಗಾಗಿ ಡಾ.ಉದಯಕುಮಾರ ನೂಜಿ ಹಾಗೂ ಹರಿಕಥೆಗಾಗಿ ನಾರಾಯಣದಾಸ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಹವ್ಯಕ ಶ್ರೀ ಪ್ರಶಸ್ತಿಯನ್ನು ಅಶ್ವಿನಿ ಭಟ್‌-ಕ್ರೀಡೆ, ರಾಜಾರಾಮ ಸಿ.ಜಿ.-ಕೃಷಿ ಉದ್ಯಮ ಹಾಗೂ ಅಶ್ವಿನಿಕುಮಾರ ಭಟ್‌-ಪರಿಸರ ಅವರಿಗೆ ನೀಡಲಾಗುತ್ತಿದ್ದು, ಹವ್ಯಕ ಸೇವಾ ಶ್ರೀ ಪ್ರಶಸ್ತಿಯನ್ನು ಅಖಿಲ ಹವ್ಯಕ ಮಹಾಸಭಾದ ತ್ರಿಯಂಬಕ ಗಣೇಶ ಹೆಗಡೆ ಅವರಿಗೆ ಕೊಡಲಾಗುತ್ತದೆ. ಇದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹವ್ಯಕ ಸಾಧಕರಿಗೆ ಸಾಂಕೇತಿಕವಾಗಿ ಪಲ್ಲವ ಪುರಸ್ಕಾರ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಕಾರ್ಯಕ್ರಮದ ಅಭ್ಯಾಗತರಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಎಚ್‌.ಎಸ್‌.ಸಚ್ಚಿದಾನಂದಮೂರ್ತಿ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಡಾ.ಜಿ.ಎಲ್‌.ಹೆಗಡೆ ಆಗಮಿಸಲಿದ್ದಾರೆ. ಹಾಗೂ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ ಪ್ರಕಾಶ ಹೆಗಡೆ ಕಲ್ಲಾರೆಮನೆ ಹಾಗೂ ಬಳಗದವರಿಂದ ವೇಣು ನಿನಾದ ಸಾಂಸ್ಕೃತಿಕ ಕಾರ್ಯಕ್ರಮವಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಕುಮಟಾ : ಬಾಡದಲ್ಲಿ 26 ಗಂಟೆಗಳ ನಂತರ ಮನೆಗೆ ನುಗ್ಗಿದ್ದ ಚಿರತೆ ಬಂಧಿ ; ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದರು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement