ಇವಿ ಚಾರ್ಜಿಂಗ್‌ – ಸ್ವ್ಯಾಪಿಂಗ್‌ ಮೂಲಸೌಕರ್ಯಕ್ಕಾಗಿ ಜಿಯೋ-ಬಿಪಿ ಜೊತೆಗೆ ಒಮ್ಯಾಕ್ಸ್‌ ಪಾಲುದಾರಿಕೆ

ನವದೆಹಲಿ/ಮುಂಬೈ: ಭಾರತದ ಪ್ರಮುಖ ರಿಯಲ್ ಎಸ್ಟೇಟ್‌ ಡೆವಲಪರ್‌ಗಳಾದ ಒಮ್ಯಾಕ್ಸ್‌ ಗುರುವಾರ ಜಿಯೋ-ಬಿಪಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದರ ಅಡಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬ್ಯಾಟರಿ ಚಾರ್ಜಿಂಗ್‌ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತದೆ.
ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಫರಿದಾಬಾದ್‌, ಘಾಜಿಯಾಬಾದ್, ನ್ಯೂ ಚಂಡೀಗಢ, ಲೂಧಿಯಾನ, ಪಟಿಯಾಲ, ಅಮೃತಸರ, ಜೈಪುರ, ಸೋನಿಪತ್ತ ಮತ್ತು ಬಹಾದುರ್‌ಗಢದಲ್ಲಿ ಹಂತ ಹಂತವಾಗಿ ಒಮ್ಯಾಕ್ಸ್‌ ಸ್ಥಳದಲ್ಲಿ ಇವಿ ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್‌ ಮೂಲಸೌಕರ್ಯವನ್ನು ಜಿಯೋ-ಬಿಪಿ ಸ್ಥಾಪಿಸಲಿದೆ.
ಒಮ್ಯಾಕ್ಸ್‌ ಸ್ಥಳಗಳಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ 24/7 ಚಾರ್ಜಿಂಗ್‌ ಮೂಲಸೌಕರ್ಯವನ್ನು ಜಿಯೋ-ಬಿಪಿ ಸ್ಥಾಪಿಸಲಿದೆ.

ಕಳೆದ ವರ್ಷದ ಭಾರತದ ಎರಡು ಅತಿದೊಡ್ಡ ಇವಿ ಚಾರ್ಜಿಂಗ್‌ ಹಬ್‌ಗಳನ್ನು ಜಿಯೋ-ಬಿಪಿ ನಿರ್ಮಿಸಿ ಅನಾವರಣಗೊಳಿಸಿದೆ. ವಿದ್ಯುದೀಕರಣದಲ್ಲಿ ಆರ್‌ಐಎಲ್ ಮತ್ತು ಬಿಪಿ ಉತ್ತಮ ಸಾಮರ್ಥ್ಯವನ್ನು ಬಳಸಿಕೊಂಡಿರುವ ಜಿಯೋ-ಬಿಪಿ, ಇವಿ ಮೌಲ್ಯ ಸರಣಿಯಲ್ಲಿ ಎಲ್ಲ ಪಾಲುದಾರರಿಗೆ ಪ್ರಯೋಜನ ಮಾಡಿಕೊಡುವ ಚಾರ್ಜಿಂಗ್‌ ವ್ಯವಸ್ಥೆಯನ್ನು ರೂಪಿಸುತ್ತಿದೆ. ಜಂಟಿ ಸಹಭಾಗಿತ್ವದ ಅಡಿಯಲ್ಲಿ ಇವಿ ಸೇವೆಗಳು ಜಿಯೋ ಬಿಪಿ ಪಲ್ಸ್‌ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಜಿಯೋ-ಬಿಪಿ ಪಲ್ಸ್‌ ಮೊಬೈಲ್ ಆಪ್‌ ಬಳಸಿಕೊಂಡು ಗ್ರಾಹಕರು ಸುಲಭವಾಗಿ ಸಮೀಪದಲ್ಲಿನ ಚಾರ್ಜಿಂಗ್‌ ಸ್ಟೇಷನ್‌ ಕಂಡುಕೊಳ್ಳಬಹುದು ಮತ್ತು ಸರಾಗವಾಗಿ ತಮ್ಮ ಎಲೆಕ್ಟ್ರಿಕ್‌ ವಾಹನಗಳನ್ನು ಚಾರ್ಜ್‌ ಮಾಡಿಕೊಳ್ಳಬಹುದು.
ಕಳೆದ 34 ವರ್ಷಗಳಲ್ಲಿ ಉತ್ತರ ಮತ್ತು ಮಧ್ಯ ಭಾರತದಲ್ಲಿನ ಹಲವು ನಗರಗಳಲ್ಲಿ ಒಮ್ಯಾಕ್ಸ್ ತನ್ನ ಹೆಜ್ಜೆ ಗುರುತು ಸಾಧಿಸಿದೆ. ಇದು ಹಲವು ರಿಯಲ್ ಎಸ್ಟೇಟ್‌ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಿದೆ. ಟೌನ್‌ಶಿಪ್‌ಗಳು, ಕಚೇರಿಗಳು, ಮಾಲ್‌ಗಳು ಮತ್ತು ಹೈ ಸ್ಟ್ರೀಟ್‌ ಪ್ರಾಜೆಕ್ಟ್‌ಗಳನ್ನೂ ಇದು ಮಾಡಿದೆ.

ಪ್ರಮುಖ ಸುದ್ದಿ :-   ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement