ವೀಕೆಂಡ್ ಟ್ರಿಪ್ಪಿಗೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ಜಲಾಶಯದಲ್ಲಿ ಮುಳುಗಿ ಸಾವು

ಚಿಕ್ಕಬಳ್ಳಾಪುರ: ವೀಕೆಂಡ್‌ನಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದ ವರದಿಯಾಗಿದೆ.
ಮೃತರನ್ನು ರಾಧಿಕಾ(19), ಪೂಜಾ (20) ಹಾಗೂ ಇಮ್ರಾನ್ ಖಾನ್(20) ಎಂದು ಗುರುತಿಸಲಾಗಿದೆ. ವೀಕೆಂಡ್ ಎಂದು ಬೆಂಗಳೂರಿನ ಫಾರ್ಮಸಿ ಕಾಲೇಜಿನ ಸುನೀತಾ, ರಾಧಿಕ, ಪೂಜಾ, ವಿಕಾಸ್, ಚನ್ನರಾ, ಇಮ್ರಾನ್ ಖಾನ್ ಎಂಬ ಆರು ವಿದ್ಯಾರ್ಥಿಗಳು ಶನಿವಾರ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಪಿಕ್‌ನಿಕ್ ಬಂದಿದ್ದರು. ಈ ವೇಳೆ ಸುನಿತಾಳನ್ನು ಹೊರತುಪಡಿಸಿ ಉಳಿದ 5 ವಿದ್ಯಾರ್ಥಿಗಳು ಜಲಾಶಯ ಹಿಂಭಾಗದ ಹಿನ್ನೀರಿನಲ್ಲಿ ಈಜಾಡಲು ಇಳಿದಿದ್ದಾರೆ. ಡಿಎಸ್​ಎಲ್​ಆರ್ ಕ್ಯಾಮೆರಾದಲ್ಲಿ ಶೂಟ್ ಶೂಟ್ ಮಾಡುತ್ತಿದ್ದರು. ಆದರೆ  ನೀರಿನ ಆಳ ಅರಿಯದ ವಿದ್ಯಾರ್ಥಿಗಳು  ನೀರಿನಲ್ಲಿ ಒಳ ಹೋದಾಗ ಪೂಜಾ ನೀರಿನಲ್ಲಿ ಮುಳುಗಿದ್ದಾಳೆ. ಪೂಜಾಳ ರಕ್ಷಣೆಗೆ ರಾಧಿಕಾ ಹೋಗಿದ್ದಾಳೆ, ಇಬ್ಬರ ರಕ್ಷಣೆಗೆ ಇಮ್ರಾನ್ ತೆರಳಿ ಮೂವರು ನೀರು ಪಾಲಾಗಿದ್ದಾರೆ. ರಾಧಿಕಾ, ಪೂಜಾ ಮತ್ತು ಇಮ್ರಾನ್ ಖಾನ್ ಜಲಾಶಯದಲ್ಲಿ ಮುಳುಗಿದ್ದಾರೆ. ವಿದ್ಯಾರ್ಥಿಗಳು ಕೂಗುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯ ಯುವಕರು ಓಡಿ ಬಂದಿದ್ದಾರೆ. ಈ ವೇಳೆ ಚನ್ನರಾಮ್ ಹಾಗೂ ವಿಕಾಸ್ ಎಂಬ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ, ನಂತರ ಪೂಜಾ ಎಂಬ ವಿದ್ಯಾರ್ಥಿನಿಯನ್ನೂ ಸಹ ನೀರಿನಿಂದ ಎಳೆದುತಂದು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೂ ಅವಳು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ನಂತರ ಪೂಜಾ ಹಾಗೂ ಇಮ್ರಾನ್ ಅವರ ಮೃತದೇಹವನ್ನು ಸ್ಥಳೀಯರ ಸಹಕಾರದೊಂದಿಗೆ ಆಗ್ನಿಶಾಮಕದಳ ಸಿಬ್ಬಂದಿ ಹುಡುಕಿ ಮೇಲೆ ತಂದಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಮುಂದಿನಕ್ರಮ ಕೈಗೊಂಡಿದ್ದಾರೆ

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement