ಎಚ್ಚರ…! : ಈ ನಂಬರ್‌ಗಳಿಂದ ವಾಟ್ಸ್‌ ಆ್ಯಪ್‌ ಕರೆ, ಸಂದೇಶಗಳು ಬರುತ್ತಿವೆ, ಸ್ವೀಕರಿಸಬೇಡಿ…!!

ದೇಶದಲ್ಲಿ ಇತ್ತೀಚಿಗೆ ಕೆಲ ದೇಶಗಳ ಕೋಡ್‌ಗಳಿಂದ ಬರುವ ಸಂಖ್ಯೆಗಳಿಂದ ವಾಟ್ಸ್‌ಆ್ಯಪ್‌ ಕರೆ ಹಾಗೂ ಸಂದೇಶದ ಮೂಲಕ ವಂಚನೆ ಬಗ್ಗೆ ನೂರಾರು ದೂರುಗಳು ದಾಖಲಾಗುತ್ತಿವೆ. ಉದ್ಯೋಗಿಗಳು ಹಾಗೂ ವ್ಯಾಪಾರ-ವ್ಯವಹಾರ ಮಾಡುತ್ತಿರುವವರನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ವಾಟ್ಸ್‌ಆ್ಯಪ್‌ ಕರೆ ಅಥವಾ ಸಂದೇಶದ ಮೂಲಕ ಜನರನ್ನು ವಂಚಿಸುತ್ತಿರುವವರು ಇಥಿಯೋಪಿಯಾ (+ 251), ಮಲೇಷ್ಯಾ (+ 60), ಇಂಡೋನೇಷ್ಯಾ (+ 62), ಕೀನ್ಯಾ (+ 254), ವಿಯೆಟ್ನಾಂ (+ 84) ಮತ್ತು ಇತರ ಕೋಡ್‌ನೊಂದಿಗೆ ಪ್ರಾರಂಭವಾಗುವ ಅಂತಾರಾಷ್ಟ್ರೀಯ ನಂಬರ್‌ಗಳಿಂದ ಕರೆ ಮಾಡುತ್ತಿದ್ದಾರೆ. ಈ ವಿದೇಶಿ ಸಂಖ್ಯೆಗಳೊಂದಿಗೆ ಆರಂಭವಾಗುವ ಕರೆಗಳನ್ನು ಸಾರ್ವಜನಿಕರು ಅಂತಾರಾಷ್ಟ್ರೀಯ ಕರೆಗಳೆಂದು ಭಾವಿಸಬಾರದು. ವಾಸ್ತವವಾಗಿ ಇಂತಹ ಕರೆಗಳು ಇಂಟರ್ನೆಟ್ ಮೂಲಕ ರವಾನೆಯಾಗುವ ಕರೆಗಳಾಗಿವೆ. ಇಲ್ಲಿಯೇ ಕುಳಿತು ಕೆಲದುಷ್ಕರ್ಮಿಗಳು ವಾಟ್ಸ್‌ಆ್ಯಪ್‌ ಕರೆಗಳಿಗಾಗಿ ಅಂತಾರಾಷ್ಟ್ರೀಯ ಸಂಖ್ಯೆಗಳನ್ನು ಮಾರಾಟ ಮಾಡುವ ಏಜೆನ್ಸಿಗಳನ್ನು ನಡೆಸುತ್ತಿದ್ದಾರೆ.

ತಿಳಿದಿರುವಂತೆ, WhatsApp VoIP ನೆಟ್‌ವರ್ಕ್ ಮೂಲಕ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಈ ವಂಚಕರು ಹೆಚ್ಚುವರಿ ಶುಲ್ಕಗಳನ್ನು ಎದುರಿಸದೆ ಯಾವುದೇ ದೇಶದಿಂದ ಕರೆ ಮಾಡಬಹುದು ಎಂದು ಹೇಳಲಾಗಿದೆ.
ಸೆಲ್ಯುಲಾರ್ ಕರೆಗಳಿಗೆ ಅನ್ವಯವಾಗುವಂತೆ ಅಂತಹ ಸಂಖ್ಯೆಯಿಂದ ಕರೆ ಮಾಡಬಹುದು ಎನ್ನಲಾಗಿದೆ. ಇಂತಹ ಕರೆಗಳ ಮೂಲಕ ಗ್ರಾಹಕರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಿ ಅವರ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡುವ ದಂಧೆಗಳು ನಡೆಯುತ್ತಿವೆ.
ಕರೆ ಮಾಡುವ ವಂಚಕರು, ಕೆಲಸ ನೀಡುವುದಾಗಿ ಅಥವಾ ಸಂದರ್ಶನಕ್ಕೆ ಕರೆಯುವುದಾಗಿ ಅಥವಾ ಉಚಿತ ಕೂಪನ್ ಹಾಗೂ ಬಹುಮಾನ ನೀಡುವುದಾಗಿ ವಂಚಿಸುತ್ತಾರೆ. ಅಲ್ಲದೆ, ಹೊಸ ವ್ಯಾಪಾರ-ವ್ಯವಹಾರ ಆರಂಭಿಸುವುದಾಗಿ ನಂಬಿಸಿ ಮೋಸ ಮಾಡುತ್ತಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಈ ಕರೆಗಳು ಮತ್ತು ಕರೆ ಮಾಡುವವರ ಕಾರ್ಯಸೂಚಿ ಯಾರಿಗೂ ತಿಳಿದಿರುವುದಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರು ನಮ್ಮ ಖಾತೆ ಅಥವಾ ಇತರರಿಂದ ಹಣವನ್ನು ಕದಿಯುವ ಉದ್ದೇಶಕ್ಕೆ ಸಹಾಯ ಮಾಡುವ ಗೌಪ್ಯ ಡೇಟಾವನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿ ವಂಚಿಸಲು ಪ್ರಯತ್ನಿಸುತ್ತಿದ್ದಾರೆ.
ಸಾರ್ವಜನಿಕರು ಇಂತಹ ಕರೆಗಳು ಬಂದರೆ ಬ್ಲಾಕ್‌ ಮಾಡಬೇಕು, ಇಲ್ಲವೆ ಪೊಲೀಸರಿಗೆ ದೂರು ನೀಡಬೇಕು. ಆದರೆ ಯಾವುದೇ ಕಾರಣಕ್ಕೂ ಅವರ ಮೋಸದಾಟಕ್ಕೆ ಮರುಳಾಗಿ ಹಣ ವರ್ಗಾಯಿಸಬಾರದು ಎಂದು ತಿಳಿಸಲಾಗಿದೆ.

2.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement