ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ:ವಾಣಿಜ್ಯ ಬಳಕೆಗಾಗಿ ಇರುವ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಇಂದಿನಿಂದ ಕಡಿತಗೊಳಿಸಲಾಗಿದೆ. ಪ್ರತಿ ಸಿಲಿಂಡರ್‌ಗಳಿಗೆ 91.50 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ವೆಬ್‌ಸೈಟ್ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಈಗ ಅದರ ಹಿಂದಿನ ಬೆಲೆ 1,976.50 ಗೆ ಹೋಲಿಸಿದರೆ 1,885 ರೂಗಳಿಗೆ ಲಭ್ಯವಿದೆ.ಅದೇ ರೀತಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೋಲ್ಕತ್ತಾದಲ್ಲಿ 2095.50 ರೂ. ಬದಲಿಗೆ 1,995.50 ರೂ., ಮುಂಬೈನಲ್ಲಿ ರೂ. 1,936.50 ಬದಲಿಗೆ 1,844 ರೂ.ಗಳು ಮತ್ತು ಚೆನ್ನೈನಲ್ಲಿ ರೂ. 2,141 ಬದಲಿಗೆ ರೂ.ಗಳ ಬದಲಿಗೆ 2,045 ರೂ.ಗಳಾಗಿವೆ.

ಸೆಪ್ಟೆಂಬರ್ 1ರಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ
19 ಕೆಜಿ ಸಿಲಿಂಡರ್‌ನ ಅತಿದೊಡ್ಡ ಬಳಕೆದಾರರ ವಿಭಾಗವಾಗಿರುವ ರೆಸ್ಟೋರೆಂಟ್‌ಗಳು, ತಿನಿಸುಗಳು ಮತ್ತು ಟೀ ಸ್ಟಾಲ್‌ನವರಿಗೆ ಈ ಬೆಲೆ ಕಡಿತದಿಂದ ಸ್ವಲ್ಪ ಸಾಮಾಧಾನ ನೀಡುತ್ತದೆ. ಸದ್ಯಕ್ಕೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಸತತ ಐದು ತಿಂಗಳಿಂದ ಕಡಿಮೆಯಾಗಿದೆ. ಮೇ 19, 2,022 ರಂದು ಗರಿಷ್ಠ 2,354 ರೂ.ಗೆ ತಲುಪಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಜೂನ್ 1 ರಂದು 2,219 ರೂ.ಗಳಷ್ಟಿತ್ತು. ಒಂದು ತಿಂಗಳ ನಂತರ ಸಿಲಿಂಡರ್ ಬೆಲೆ 98 ರೂ.ಗಳಷ್ಟು ಕುಸಿದು 2,021 ರೂ. ಗೆ ತಲುಪಿತು. ಈ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಜುಲೈ 6 ರಂದು 2,012.50 ರೂ.ಗೆ ಇಳಿಸಿತು. ಆಗಸ್ಟ್ ನಲ್ಲಿ ಸಿಲಿಂಡರ್ ಬೆಲೆ 1976.50 ರೂ.ಗಳಿಗೆ ಇಳಿಕೆ ಕಂಡಿತು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement