ಲಕ್ನೋ: ವ್ಯಕ್ತಿಯೊಬ್ಬರಿಗೆ ಕೇವಲ ಐದು ನಿಮಿಷಗಳ ಅಂತರದಲ್ಲೇ ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಿದಘಟನೆ ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ಲಲಿತಪುರ ಜಿಲ್ಲೆಯ ರಾವರ್ಪುರದ ನರ್ಸಿಂಗ್ ಹೋಂಗೆ ಲಸಿಕೆ ಪಡೆಯಲು ವ್ಯಕ್ತಿಯೊಬ್ಬರು ಹೋಗಿದ್ದಾರೆ. ಮಾತುಕತೆಯಲ್ಲಿ ತಲ್ಲೀನರಾಗಿದ್ದ ನರ್ಸಿಂಗ್ ಸಿಬ್ಬಂದಿ ಐದು ನಿಮಿಷಗಳಲ್ಲಿಯೇ ಎರಡೂ ಡೋಸ್‌ಗಳ ಲಸಿಕೆ ನೀಡಿದ್ದಾರೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.
ಅವರು ಎರಡನೇ ಇಂಜೆಕ್ಷನ್ ಕೊಡಿವಾಗ ಅದು ಲಸಿಕೆಯ ಎರಡನೇ ಡೋಸ್ ಅದು ಎಂಬುದು ನನಗೆ ತಿಳಿದಿರಲಿಲ್ಲ ಎಂದು ವ್ಯಕ್ತಿ ಹೇಳಿಕೊಂಡಿದ್ದಾರೆ.
ಮನೆಗೆ ಹೋದ ನಂತರ ಅವರ ಆರೋಗ್ಯದಲ್ಲಿ ವ್ಯತ್ಯಯ ಕಾಣಿಸಿಕೊಂಡಿದೆ. ಆಮೇಲೆ ಮನೆಯವರಿಗೆ ಈ ವಿಷಯ ಹೇಳಿಕೊಂಡಿದ್ದು, ಅವರು ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಿದ್ದಾರೆ. ನಂತರ ಅವರನ್ನು ತುರ್ತು ಚಿಕಿತ್ಸೆಗೆ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಈ ಮಾಹಿತಿ ನೀಡಿದ್ದು, ವೈದ್ಯಕೀಯ ಸಿಬ್ಬಂದಿ ಬೇಜವಾಬ್ದಾರಿ ಕುರಿತು ತನಿಖೆಗೆ ಆದೇಶಿಸಲಾಗಿದೆ. ಎರಡು ಡೋಸ್‌ಗಳನ್ನು ಒಟ್ಟಿಗೆ ನೀಡುವುದರಿಂದ ಯಾವುದೇ ಅಡ್ಡತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ನಿಯಮದ ಪ್ರಕಾರ ಲಸಿಕೆಯ ಎರಡು ಡೋಸ್‌ಗಳ ನಡುವೆ ಕನಿಷ್ಠ ನಾಲ್ಕು ವಾರಗಳ ಅಂತರವಿರಬೇಕು ಎಂದು ಇದೆ. ಹೀಗಾಗಿ ಬೇಜವಾಬ್ದಾರಿ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ