ಮದುವೆ ಮನೆಯಲ್ಲಿ ಗುಂಡಿನ ಮಳೆಗೈದ ಮಾಜಿ ಸೈನಿಕ; ಸಂಬಂಧಿಕರು ದಂಗು, ಪ್ರಕರಣ ದಾಖಲು

ಚಿಕ್ಕೋಡಿ: ಮದುವೆ ಸಮಾರಂಭದಲ್ಲಿ ಮಾಜಿ ಸೈನಿಕನೊಬ ಗಾಳಿಯಲ್ಲಿ ಗುಂಡಿನ ಸುರಿಮಳೆಗೈದಿದ್ದಾರೆ. ಗುಂಡು ಹಾರಿಸಿರುವ ಮಾಜಿ ಯೋಧನ ವಿಡಿಯೋ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದ್ದು, ಮದುವೆಗೆ ಬಂದವರು ಒಂದು ಕ್ಷಣ ಕಂಗಾಲಾಗಿದ್ದಾರೆ. ರಫಿಕ್ ಅಹಮ್ಮದ ತಹಶೀಲ್ದಾರ ಎಂಬ ಮಾಜಿ ಯೋಧ ಗಾಲಿಯಲ್ಲಿ ಅನೇಕ ಬಾರಿ ಗುಂಡು ಹಾರಿಸಿದ್ದಾನೆ. ತನ್ನ 9.62 mmನ ಲೈಸೆನ್ಸ್ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಮದುವೆ ಸಮಾರಂಭದ ಖುಷಿಯಲ್ಲಿ 5 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಸೈನಿಕನ ಹುಚ್ಚಾಟದಿಂದ ಮದುವೆಗೆ ಆಗಮಿಸಿದ್ದ ಸಂಬಂಧಿಗಳು ಗಾಬರಿಯಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಜಿ ಸೈನಿಕನ ವಿರುದ್ದ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement