ನವದೆಹಲಿ : ಕಳೆದ ವಾರ ಗುರುಗ್ರಾಮದ ಹೊಟೇಲ್‌ನಲ್ಲಿ ಗುಂಡು ಹಾರಿಸಿ ಹತ್ಯೆಗೀಡಾದ ಮಾಡೆಲ್ ದಿವ್ಯಾ ಪಹುಜಾ ಅವರ ಮೃತದೇಹ ಹರಿಯಾಣದ ಕಾಲುವೆಯಲ್ಲಿ ಪತ್ತೆಯಾಗಿದೆ. ಪಂಜಾಬಿನ ಭಾಕ್ರಾ ಕಾಲುವೆಯಲ್ಲಿ ಶವ ಎಸೆದ ನಂತರ ಅದು ಪಕ್ಕದ ಹರ್ಯಾಣ ರಾಜ್ಯಕ್ಕೆ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ತೋಹ್ನಾದಿಂದ ಗುರುಗ್ರಾಮದ ಪೊಲೀಸರ ತಂಡ ಶವವನ್ನು ಹೊರತೆಗೆದಿದೆ. ಅವರು ಪಹುಜಾ ಕುಟುಂಬಕ್ಕೆ ಫೋಟೋಗಳನ್ನು ಕಳುಹಿಸಲಾಗಿದೆಹಾಗೂ ಕುಟುಂಬದವರು ಆಕೆಯ ದೇಹವನ್ನು ಗುರುತಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಜನವರಿ 1 ರಂದು ನಡೆದಿದ್ದು, ಶವವನ್ನು ಜನವರಿ 2 ರಂದು ಕಾಲುವೆಯಲ್ಲಿ ಎಸೆದಿದ್ದಾರೆ ಎಂದು ಹಿರಿಯ ಗುರುಗ್ರಾಮ ಪೊಲೀಸ್ ಅಧಿಕಾರಿ ಮುಖೇಶ ಕುಮಾರ ತಿಳಿಸಿದ್ದಾರೆ.
ಆಕೆಯ ಶವವನ್ನು ಪಂಜಾಬ್‌ನ ಕಾಲುವೆಗೆ ಎಸೆದಿರುವುದಾಗಿ ಆರೋಪಿಯೊಬ್ಬ ಶುಕ್ರವಾರ ತಪ್ಪೊಪ್ಪಿಕೊಂಡಿದ್ದಾನೆ. ಶುಕ್ರವಾರ ಸಂಜೆ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಬಂಧನಕ್ಕೊಳಗಾದ ಬಾಲರಾಜ ಗಿಲ್, ಗುರುಗ್ರಾಮದಿಂದ ಸುಮಾರು 270 ಕಿಲೋಮೀಟರ್ ದೂರದಲ್ಲಿರುವ ಪಟಿಯಾಲಾದ ಕಾಲುವೆಯಲ್ಲಿ ಮಾಡೆಲ್ ದಿವ್ಯಾ ಪಹುಜಾ ಶವವನ್ನು ಎಸಿದಿರುವುದಅಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಜನವರಿ 1 ರಂದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಜನವರಿ 1 ರಂದು ಗುರುಗ್ರಾಮದ ಹೋಟೆಲ್‌ನಲ್ಲಿ ದಿವ್ಯಾ ಪಹುಜಾ ಅವರನ್ನು ಕೊಲ್ಲಲಾಯಿತು, ಕೊಲೆಗಾರರು ಆಕೆಯ ದೇಹವನ್ನು ಹೋಟೆಲ್‌ನಿಂದ ಕಾರಿನಲ್ಲಿ ಎಳೆದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. 27 ವರ್ಷದ ಯುವತಿಯನ್ನು ಐವರು ಹೋಟೆಲ್ ಕೋಣೆಗೆ ಕರೆದೊಯ್ದರು. ಹೋಟೆಲ್ ಮಾಲೀಕನ ಅಶ್ಲೀಲ ಚಿತ್ರಗಳನ್ನಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ತಲೆಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಪಹುಜಾ ತಮ್ಮ ಫೋನ್‌ನಲ್ಲಿ ಹೋಟೆಲ್ ಮಾಲೀಕ ಅಭಿಜೀತ್ ಸಿಂಗ್ ನ ಕೆಲವು ಅಶ್ಲೀಲ ವೀಡಿಯೊಗಳನ್ನು ಇಟ್ಟುಕೊಂಡಿದ್ದರು, ಅಭಿಜೀತ್ ಸಿಂಗ್ ಅದನ್ನು ಡಿಲೀಟ್ ಮಾಡಲು ಹೇಳಿದರೂ ಆಕೆ ನಿರಾಕರಿಸಿದಳು. ಇದು ಸಿಂಗ್ ಮತ್ತು ಅವರ ಕನಿಷ್ಠ ಇಬ್ಬರು ಸಹಾಯಕರು ಅವಳನ್ನು ಶೂಟ್ ಮಾಡಲು ಕಾರಣವಾಯಿತು ಎನ್ನಲಾಗಿದೆ. ಆದರೆ ಪಹುಜಾ ಕುಟುಂಬ ಈ ಆರೋಪವನ್ನು ಕಟುವಾಗಿ ನಿರಾಕರಿಸಿದೆ.
ದಿವ್ಯಾ ಪಹುಜಾ 2016 ರಲ್ಲಿ ತನ್ನ ಆಗಿನ ಗೆಳೆಯ ಮತ್ತು ಗುರುಗ್ರಾಮದ ಗ್ಯಾಂಗ್‌ಸ್ಟರ್ ಸಂದೀಪ ಗಡೋಲಿಯಾ ಎಂಬಾತನ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಜೈಲಿನಲ್ಲಿದ್ದಳು. ಕಳೆದ ವರ್ಷ ಜೂನ್‌ನಲ್ಲಿ ಆಕೆಗೆ ಜಾಮೀನು ನೀಡಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ