
ಖರಗ್ ಪುರ: ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಇಲ್ಲಿನ ರೈಲ್ವೆ ವಿಭಾಗ ವ್ಯಾಪ್ತಿಯ ದುವಾ ನಿಲ್ದಾಣದ ಬಳಿ ಶನಿವಾರ ಬೆಳಿಗ್ಗೆ ಸಿಕಂದರಾಬಾದ್ ನಿಂದ ಹೊರಟ ಫಲಕ್ನುಮಾ ಎಕ್ಸ್ ಪ್ರೆಸ್ ರೈಲು ಹರಿದು ಮೂವರು ರೈಲ್ವೆ ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಆಗ್ನೇಯ ರೈಲ್ವೆಯ ದುವಾ ಮತ್ತು ಬಲಿಚಕ್ ನಿಲ್ದಾಣಗಳ ನಡುವೆ ಭಾನುವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಈ ಅಪಘಾತ ಸಂಭವಿಸಿದೆ. ಎಕ್ಸ್ ಪ್ರೆಸ್ ರೈಲು ನಾಲ್ವರು ರೈಲ್ವೆ ಕಾರ್ಮಿಕರ (ಗ್ಯಾಂಗ್ ಮೆನ್) ಮೇಲೆ ಹರಿದಿದೆ. ಒಟ್ಟು ಐವರು ಹಳಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದಾಗ ಅವರಲ್ಲಿ ಒಬ್ಬರು ಕುಡಿಯುವ ನೀರು ತರಲು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.



ನಿಮ್ಮ ಕಾಮೆಂಟ್ ಬರೆಯಿರಿ