ಚುನಾವಣಾ ರಾಜ್ಯಗಳಲ್ಲಿ ಮೋದಿ ಭಾವಚಿತ್ರದ ಹೋರ್ಡಿಂಗ್‌ ತೆಗೆಯಲು ಚುನಾವಣಾ ಆಯೋಗ ಆದೇಶ

ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಪೆಟ್ರೋಲ್‌ ಬಂಕ್‌ಗಳಲ್ಲಿ ಪ್ರಧಾನಿ ಭಾವಚಿತ್ರ ಇರುವ ಹೋರ್ಡಿಂಗ್‌ಗಳನ್ನು ತೆಗೆದುಹಾಕಲು ಚುನಾವನಾ ಆಯೋಗವು ಪೆಟ್ರೋಲ್‌ ಪಂಪ್‌ಗಳಿಗೆ ಆದೇಶ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರಗಳನ್ನು ಹೊಂದಿರುವ ಕೇಂದ್ರ ಸರ್ಕಾರದ ಯೋಜನೆಗಳ ಹೋರ್ಡಿಂಗ್‌ಗಳನ್ನು ೭೨ ಗಂಟೆಗಳಲ್ಲಿ ತೆಗೆದುಹಾಕುವಂತೆ ಚುನಾವಣಾ ಆಯೋಗ (ಇಸಿ) ಎಲ್ಲಾ ಪೆಟ್ರೋಲ್ ಪಂಪ್ ವಿತರಕರು ಮತ್ತು ಇತರ ಸಂಸ್ಥೆಗಳಿಗೆ ಬುಧವಾರ ನಿರ್ದೇಶನ ನೀಡಿದೆ.
ಅಂತಹ ಹೋರ್ಡಿಂಗ್‌ಗಳಲ್ಲಿ ಪ್ರಧಾನ ಮಂತ್ರಿಗಳ ಛಾಯಾಚಿತ್ರವನ್ನು ಬಳಸುವುದು ಮಾದರಿ ನೀತಿ ಸಂಹಿತೆ ಉಲ್ಲಂಘಿಸುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ
ಪಶ್ಚಿಮ ಬಂಗಾಳದ ಆಡಳಿತ ತೃಣಮೂಲ ಕಾಂಗ್ರೆಸ್ ನಿಯೋಗವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾದ ನಂತರ ಮತ್ತು ಮೋದಿಯವರ ಛಾಯಾಚಿತ್ರಗಳನ್ನು ಹೋರ್ಡಿಂಗ್‌ಗಳಲ್ಲಿ ಬಳಸುವುದು ಮತದಾನ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ ನಂತರ ಚುನಾವಣಾ ಆಯೋಗವು ಈ ಆದೇಶ ಮಾಡಿದೆ. ಚುನಾವಣಾ ಆಯೋಗವು ಈ ಸಂಬಂಧ 1,000 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ. ಆ ಪೈಕಿ 450 ಜನರು ನಿಜವಾದವರು ಎಂದು ಕಂಡುಬಂದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement