ಬೆಳಗಾವಿಯಲ್ಲಿ ಮೂವರು ಶಿಶುಗಳ ಸಾವು ಪ್ರಕರಣ: ಸಮಗ್ರ ವರದಿ ಕೇಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎರಡು ಗ್ರಾಮಗಳಲ್ಲಿ ಸೋಮವಾರ, ಜನವರಿ 17 ರಂದು 10-15 ತಿಂಗಳ ವಯಸ್ಸಿನಮೂರು ಶಿಶುಗಳು ದಡಾರ-ರುಬೆಲ್ಲಾ ಲಸಿಕೆಯನ್ನು ಪಡೆದ ನಂತರ ಮೃತಪಟ್ಟಿಪ್ಪಿವೆ.
ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಅವರಿಂದ ವಿವರವಾದ ವರದಿ ಕೇಳಿದ್ದಾರೆ. ಬೆಳಗಾವಿ ಡಿಸಿ ಜತೆ ದೂರವಾಣಿ ಮೂಲಕ ಮಾತನಾಡಿದ ಬೊಮ್ಮಾಯಿ, ಪ್ರಕರಣದ ಸಮಗ್ರ ವರದಿ ನೀಡುವಂತೆ ಕೋರಿದ್ದಾರೆ.
ಕ್ರಿಮಿನಾಶಕವಲ್ಲದ ಸಿರಿಂಜ್‌ಗಳಿಂದ ಸೋಂಕು ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥ ನರ್ಸಿಂಗ್ ಸಿಬ್ಬಂದಿ ವಿರುದ್ಧ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ.
ಜನವರಿ 11 ಮತ್ತು 12 ರಂದು ಎರಡೂ ಗ್ರಾಮಗಳಿಂದ 20 ಕ್ಕೂ ಹೆಚ್ಚು ಶಿಶುಗಳು ಲಸಿಕೆ ಪಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಲಸಿಕೆ ಹಾಕಿದ ಒಂದೆರಡು ದಿನದಲ್ಲಿ ಮೂರು ಶಿಶುಗಳು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬಿಮ್ಸ್) ಶನಿವಾರ ಮೃತಪಟ್ಟಿದೆ.
ಆಸ್ಪತ್ರೆಗೆ ದಾಖಲಾಗಿರುವ ಇನ್ನಿಬ್ಬರು ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಲಸಿಕೆಯ ಮಾದರಿಗಳನ್ನು ಕೇಂದ್ರ ಲಸಿಕೆ ಘಟಕಕ್ಕೆ ಕಳುಹಿಸಲಾಗಿದೆ ಮತ್ತು ಮೃತ ಮಕ್ಕಳ ಮೂತ್ರ, ಮಲ ಮತ್ತು ಒಳಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಳಗಾವಿ | ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು ; ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement