ಯುಜಿಸಿ, ಐಸಿಎಆರ್, ಎಐಸಿಟಿಇ ವೇತನದಾರರಿಗೂ ಶೇ.11 ತುಟ್ಟಿ ಭತ್ಯೆ ಹೆಚ್ಚಳ

ಬೆಂಗಳೂರು: ಯುಜಿಸಿ, ಐಸಿಎಆರ್, ಎಐಸಿಟಿಇ ವೇತನ ಶ್ರೇಣಿಗಳಲ್ಲಿ ಕಾರ್ಯ ನಿರ್ವ ಹಿಸುವ ನೌಕರರಿಗೆ ರಾಜ್ಯ ಸರ್ಕಾರ ಶೇ.11ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
2016ರ ಪರಿಷ್ಕೃತ ಯುಜಿಸಿ, ಐಸಿಎ ಆರ್, ಎಐಸಿಟಿಇ ವೇತನ ಶ್ರೇಣಿಗಳಲ್ಲಿ ನೌಕರರ ಮೂಲ ವೇತನದ ಶೇ.17ರಿಂದ ಶೇ.28ಕ್ಕೆ ತುಟ್ಟಿಭತ್ಯೆ ದರಗಳನ್ನು ಪರಿಷ್ಕರಿಸಿದ್ದು, ಜುಲೈ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬಂದಿವೆ.
2020ರ ಜನವರಿ 1ರಿಂದ ಕಳೆದ ಜೂನ್ 30ರ ವರೆಗಿನ ಅವಧಿಯ ತುಟ್ಟಿಭತ್ಯೆಯ ಹೆಚ್ಚುವರಿ ಕಂತುಗಳನ್ನು ಸಹ ಬಿಡುಗಡೆಗೊಳಿಸಲು ಸರ್ಕಾರ ಆದೇಶಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಅವಧಿಯ ತುಟ್ಟಿ ಭತ್ಯೆದರಗಳನ್ನು ಸ್ಥಗಿತಗೊಳಿಸಿ ಈ ಹಿಂದೆ ಸರ್ಕಾರ ಆದೇಶ ಹೊರಡಿಸಿತ್ತು.
ರಾಜ್ಯ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆ ವೇತವನ್ನು ಪರಿಷ್ಕರಿಸಿ ಕಳೆದ ವಾರ ಆದೇಶ ಹೊರಡಿಸಿತ್ತು. ಅದರಂತೆ ವಿಶ್ವವಿದ್ಯಾಲಯಗಳು, ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು, ಮೊದಲಾದ ಪೂರ್ಣಕಾಲಿಕ ನೌಕರರಿಗೂ ತುಟ್ಟಿಭತ್ಯೆ ದರಗಳನ್ನು ಪರಿಷ್ಕರಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement