ಬೆಳಗಾವಿ: ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಅನಾಮಿಕನಿಂದ ಕೊಲೆ ಬೆದರಿಕೆ ಪತ್ರ ಬಂದಿದೆ.
ನಿಜಗುಣಾನಂದ ಶ್ರೀಗಳಿಗೆ (Nijagunananda Swamiji) ಪತ್ರ ಬರೆದು ಬೆದರಕೆ ಹಾಲಾಗಿದ್ದು, ‘2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು 2023ರಲ್ಲಿ ತಪ್ಪಲ್ಲ’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು 2023ರಲ್ಲಿ ತಪ್ಪಲ್ಲ. ನಿನ್ನ ಪಾಪದ ಕೊಡ ತುಂಬಿದೆ ಆದಷ್ಟು ಬೇಗ ನಿನ್ನ ತಿಥಿ, ನಿನ್ನ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನಗೆ ಘೋರ ಹತ್ಯೆಯೆ ಬರುತ್ತೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ, ಇನ್ನು ದಿನಗಳನ್ನ ಎಣಿಸು ಎಂದು ಬೆದರಿಕೆ ಹಾಕಲಾಗಿದೆ.
ಪತ್ರಗಳಲ್ಲಿ ಒಂದೇ ತರಹದ ಬರಹವಿದೆ
ಬೆದರಿಕೆ ಪತ್ರ ಕುರಿತು ಮಾತನಾಡಿದ ನಿಜಗುಣಾಂದ ಶ್ರೀಗಳು, ಈಗಾಗಲೇ 20 ಜೀವ ಬೆದರಿಕೆ ಪತ್ರಗಳ ಬಂದಿವೆ. ಪತ್ರಗಳಲ್ಲಿ ಒಂದೇ ತರದ ಬರಹ ಇದ್ದು, ಒಬ್ಬ ವ್ಯಕ್ತಿ ಇದನ್ನು ಮಾಡುತ್ತಿದ್ದಾನೆ. ಬೇರೆ ಬೇರೆ ಕಡೆಗಳಿಂದ ಪತ್ರಗಳು ಬರುತ್ತವೆ. ಸಾವಿನ ಬಗ್ಗೆ ನನಗೆ ಭಯ ಇಲ್ಲ, ಹೋದರೆ ಸೇವೆ ನಿಲ್ಲುತ್ತದೆ ಎನ್ನುವ ಆತಂಕ ಇದೆ. ಸಂಪ್ರದಾಯದ ವಾದಿಗಳ ಅಟ್ಟಹಾಸ ಮುಂದುವರೆದಿದೆ. ಇದಕ್ಕೆ ಸರ್ಕಾರ ತಿಲಾಂಜಲಿ ಇಡಬೇಕು ಎನ್ನುವುದು ನಮ್ಮ ಆಗ್ರಹ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ