ಡ್ರೋಣ್‌ ಮೂಲಕ ಲಸಿಕೆ ವಿತರಣೆ ಸಾಧ್ಯವಾಗಿಸಲು ಹೊರಟ ತೆಲಂಗಾಣ..!

ಹೈದರಾಬಾದ್​: ದೇಶವನ್ನು ಕಾಡುತ್ತಿರುವ ಕೊರೊನಾ ವಿರುದ್ಧ ಸದ್ಯಕ್ಕಿರುವ ಪ್ರಬಲ ಆಯುಧ ಲಸಿಕೆ​​. ಈ ಲಸಿಕೆಯನ್ನು ಬೇಗ ತರಿಸಿಕೊಳ್ಳಲು ತೆಲಂಗಾಣ ಸರ್ಕಾರವು ಈಗ ತಂತ್ರಜ್ಞಾನದ ಮೊರೆ ಹೋಗಿದೆ.
ತೆಲುಗು ಜನಕ್ಕೆ ಲಸಿಕೆಯನ್ನು ಆಗಸದ ಮೂಲಕ ಕೊಡಲು ಯೋಚಿಸಿ ಕಾರ್ಯಗತ ಮಾಡಲು ಹೊರಟಿದೆ. ತೆಲಂಗಾಣ ಸರ್ಕಾರ ಈಗಡ್ರೋಣ್​ ಮೂಲಕ ಲಸಿಕೆ ವಿತರಣೆ ಮಾಡುವ ಬಗ್ಗೆ ಪ್ರಾಯೋಗಿಕ ಪರೀಕ್ಷೆಗೆ ತೆಲಂಗಾಣ ಸರ್ಕಾರ ಮುಂದಾಗಿದೆ.

ದೃಷ್ಟಿಗೋಚರ ರೇಖೆಯೊಳಗೆ ಲಸಿಕೆಗಳನ್ನು ಪ್ರಾಯೋಗಿಕವಾಗಿ ತಲುಪಿಸಲು ಡ್ರೋನ್‌ಗಳನ್ನು ಬಳಸಲು ತೆಲಂಗಾಣ ಸರ್ಕಾರಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ. ಈ ಪ್ರಾಯೋಗಿಕ ವಿತರಣೆಯ ಯಾವ ನಿರ್ದಿಷ್ಟ ಲಸಿಕೆ ಭಾಗವಾಗಲಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ.

ವ್ಯಾಕ್ಸಿನ್​ ಸಾಗಾಟಕ್ಕೆ ಡ್ರೋಣ್​ ಬಳಸುವ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವನ್ನು ಸಿಎಂ ಕೆ.ಚಂದ್ರಶೇಖರ್​ ರಾವ್​ ಅವರನ್ನು ಸಂಪರ್ಕಿಸಿದೆ. ಈ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ ಡ್ರೋಣ್​​ ಪ್ರಾಯೋಗಿಕ ಬಳಕೆಗೆ ಅನುಮತಿ ನೀಡಿದೆ.

ಟ್ವಿಟ್ಟರ್ನಲ್ಲಿ ಸಚಿವಾಲಯವು ತೆಲಂಗಾಣ ಸರ್ಕಾರಕ್ಕೆ 2021 ರ ಮಾನವರಹಿತ ವಿಮಾನ ವ್ಯವಸ್ಥೆ (ಯುಎಎಸ್) ನಿಯಮಗಳಿಂದ ಷರತ್ತುಬದ್ಧ ವಿನಾಯಿತಿ ನೀಡಿದೆ ಎಂದು ಸಚಿವಾಲಯ ಹೇಳಿದೆ.ಈ ವಿನಾಯಿತಿ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ಮಾನ್ಯವಾಗಿರುತ್ತದೆ.
ಕೋವಿಡ್‌-19 ಲಸಿಕೆ ನೀಡಲು ಡ್ರೋನ್‌ಗಳನ್ನು ಬಳಸುವ ಬಗ್ಗೆ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಏಪ್ರಿಲ್ 22 ರಂದು ಸಚಿವಾಲಯವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಅನುಮತಿ ನೀಡಿತ್ತು.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಡ್ರೋಣ್​ ಮೂಲಕ ವ್ಯಾಕ್ಸಿನ್​ ವಿತರಣೆ ಪ್ರಾಯೋಗಿಕವಾಗಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಜನರು ಇರುವಲ್ಲಿಯೇ ಲಸಿಕೆ ನೇರವಾಗಿ ತರಿಸಬಹುದಾಗಿದೆ.
ಸದ್ಯ ಪ್ರಯೋಗಿಕ ಹಂತದಲ್ಲಿರುವ ಡ್ರೋನ್​ ಮೂಲಕ ಕೋವಿಡ್‌ ವ್ಯಾಕ್ಸಿನ್​ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳೂ ಇದನ್ನು ಅಳವಡಿಸಲಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement