ರಜನಿಕಾಂತ್ ಅಭಿನಯದ ಜೈಲರ್ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಆಕ್ಷನ್ ಥ್ರಿಲ್ಲರ್ ಆಗಸ್ಟ್ 10 ರಂದು ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಬಿಡುಗಡೆಗೆ ಮುಂಚಿತವಾಗಿ, ತಯಾರಕರು ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಿಯೊ ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ಕೇಕೆ ಹಾಕಿ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.
ಈ ವೇಳೆ ಚಿತ್ರದ ಬಗ್ಗೆ ಮಾತನಾಡಿದ ರಜನಿಕಾಂತ್, ಮದ್ಯಪಾನ ಮತ್ತು ತಮ್ಮ ಜೀವನದ ಮೇಲೆ ಆದ ಅದರ ಪರಿಣಾಮಗಳ ಬಗ್ಗೆ ಮಾತನಾಡಿದರು. “ಜೀವನದಲ್ಲಿ ಮದ್ಯಪಾನ ಮಾಡದಿದ್ದರೆ ನಾನು ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುತ್ತಿದ್ದೆ. ನಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪೆಂದರೆ ಮದ್ಯಪಾನ. ಅದನ್ನು ಸಂಪೂರ್ಣವಾಗಿ ಬಿಡಬೇಕು ಎಂದು ನಾನು ಹೇಳುತ್ತಿಲ್ಲ. ನೀವು ಸಂತೋಷಕ್ಕಾಗಿ ಮದ್ಯ ಸೇವಿಸಿ. ಆದರೆ ನಿಯಮಿತವಾಗಿ ಕುಡಿಯಬೇಡಿ. ಇದು ಆರೋಗ್ಯ ಮತ್ತು ಸಂತೋಷ ಎರಡನ್ನೂ ಹಾಳು ಮಾಡುತ್ತದೆ ಎಂದು ಅವರು ಹೇಳಿದರು.
ನನ್ನ ಸಹೋದರ ನೀನು ಕಿಂಗ್ ಎಂದು ಹೇಳಿದರು, ಆದರೆ ಕುಡಿಯಬೇಡ ಎಂದು ಹೇಳಿದರು. ನಾನು ಜೀವನದಲ್ಲಿ ಮದ್ಯಪಾನ ಮಾಡದಿದ್ದರೆ. ಇಂದು, ನಾನು ಏನು ಆಗಿದ್ದೇನೆಯೋ ನಾನು ಜೀವನದಲ್ಲಿ ಅದಕ್ಕಿಂತ ಉತ್ತಮ ವ್ಯಕ್ತಿಯಾಗುತ್ತಿದ್ದೆ ಎಂದು ಹೇಳಿದರು.
ಕುಡಿದರೆ ಇಡೀ ಜೀವನವೇ ಸಮಸ್ಯೆಯಾಗುತ್ತದೆ. ನಿಮ್ಮ ಪೋಷಕರು, ನಿಮ್ಮ ಕುಟುಂಬ ಹೀಗೆ ಎಲ್ಲರೂ ಅದರಿಂದ ಬಳಲುತ್ತಾರೆ. ಕುಡಿಯಬೇಡಿ” ಎಂದು ರಜನೀಕಾಂತ್ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ