ಕರ್ನಾಟಕದಲ್ಲಿ ಭಾನುವಾರ ಕೊರೊನಾ ಸೋಂಕು, ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆ

ರಾಜ್ಯದಲ್ಲಿ ಭಾನುವಾರ ಹೊಸದಾಗಿ 775 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 9 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಹಾಗೂ 860 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,213ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಒಟ್ಟಾರೆ ಸೋಂಕಿತರ ಸಂಖ್ಯೆ 29,73,395 ಕ್ಕೆ ಏರಿಕೆಯಾಗಿದೆ ಹಾಗೂ ಚೇತರಿಸಿಕೊಂಡವರ ಸಂಖ್ಯೆ 29,22,427 ಕ್ಕೆ ಹೆಚ್ಚಳವಾಗಿದೆ.
ಸೋಂಕಿನಿಂದ ಒಟ್ಟಾರೆ ಮೃತಪಟ್ಟವವರ ಸಂಖ್ಯೆ 37,717 ಕ್ಕೆ ಹೆಚ್ಚಳವಾಗಿದೆ.
ಚಿಕ್ಕ ಬಳ್ಳಾಪುರ, ಹಾವೇರಿ, ಕಲಬುರಗಿ, ಕೊಪ್ಪಾಳ ,ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.54 ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ. 1.16ಕ್ಕೆ ಇಳಿಕೆಯಾಗಿದೆ.
ಜಿಲ್ಲಾವಾರು ಹೊಸ ಸೋಂಕಿನ ಸಂಖ್ಯೆ
ಬಾಗಲಕೋಟೆ – 3, ಬಳ್ಳಾರಿ – 1, ಬೆಳಗಾವಿ -7, ಬೆಂಗಳೂರು ಗ್ರಾಮಾಂತರ- 24, ಬೆಂಗಳೂರು ನಗರ. – 255, ಬೀದರ್ -1, ಚಾಮರಾಜನಗರ – 4, ಚಿಕ್ಕಬಳ್ಳಾಪುರ – 0, ಚಿಕ್ಕಮಗಳೂರು- 52, ಚಿತ್ರದುರ್ಗ – 9, ದಕ್ಷಿಣ ಕನ್ನಡ -99, ದಾವಣಗೆರೆ -2,  ಧಾರವಾಡ -2, ಗದಗ – 1, ಹಾಸನ – 15, ಹಾವೇರಿ – 0, ಕಲಬುರಗಿ- 0, ಕೊಡಗು – 55, ಕೋಲಾರ -31,ಕೊಪ್ಪಳ -0 ,ಮಂಡ್ಯ – 12,  ಮೈಸೂರು -81, ರಾಯಚೂರು -1, ರಾಮನಗರ -1, ಶಿವಮೊಗ್ಗ – 21, ತುಮಕೂರು -29, ಉಡುಪಿ – 40, ಉತ್ತರ ಕನ್ನಡ – 28, ವಿಜಯಪುರ – 1 ಹಾಗೂ ಯಾದಗಿರಿ- 0

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement