ಆರ್ಯನ್‌ ಖಾನ್‌ ನಿಂದ ತಂದೆಯ ಜಾಹೀರಾತಿಗೆ ಕತ್ತರಿ : ಶಾರುಖ್ ಖಾನ್ ನಟನೆ ಜಾಹೀರಾತು ನಿಲ್ಲಿಸಿದ ಬೈಜುಸ್‌..!

ನವದೆಹಲಿ: ಅರಬ್ಬೀ ಸಮುದ್ರದಲ್ಲಿ ನಡೆದ ಡ್ರಗ್ ಪ್ರಕರಣದಲ್ಲಿ ಸಿಲುಕಿದ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್ ಖಾನ್ ತನಿಖೆಯ ವೇಳೆ ಚರಸ್ ಸೇವನೆ ಮಾಡಿರುವುದಾಗಿ ಎನ್‌ಸಿಬಿ ಹೇಳಿದೆ. ಮಗನ ಡ್ರಗ್ಸ್‌ ಪ್ರಕರಣ ತಂದೆ ಶಾರುಖ್‌ಗೆ ನಷ್ಟಕ್ಕೆ ಕಾರಣವಾಗಿದೆ. ಎನ್‌ಸಿಬಿ ಆರ್ಯನ್‌ ಮಾದಕ ವಸ್ತು ಸೇವನೆಯ ಕುರಿತು ಮಾಹಿತಿ ನೀಡುತ್ತಲೇ ಇತ್ತ ಜಾಹೀರಾತು ಕಂಪೆನಿಗಳು ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಜಾಹೀರಾತುಗಳಿಗೆ ಕತ್ತರಿ ಹಾಕಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಹಲವು ವರ್ಷಗಳಿಂದಲೂ ನಟಿಸುತ್ತಿರುವ ಎಲ್ಲಾ ಜಾಹೀರಾತುಗಳನ್ನು ಎಜು-ಟೆಕ್ ಮೇಜರ್ ಬೈಜುಸ್‌ ಸ್ಥಗಿತಗೊಳಿಸಿದೆ. ವರದಿಯ ಪ್ರಕಾರ, BYJU’s ಕಳೆದ ಕೆಲವು ದಿನಗಳಿಂದ ಶಾರುಖ್‌ ಅವರ ಎಲ್ಲ ಜಾಹೀರಾತುಗಳನ್ನು ನಿಲ್ಲಿಸಿದೆ. ಡ್ರಗ್ಸ್‌ ಪ್ರಕರಣದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶಾರುಖ್‌ ಖಾನ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬೈಜೂಸ್‌ ಕಂಪೆನಿಯ ವಿರುದ್ಧವೂ ಟೀಕೆಗಳು ಕೇಳಿಬಂದಿತ್ತು. ಇದೇ ಕಾರಣದಿಂದಲೇ ಕಂಪನಿ ಜಾಹೀರಾತು ಪ್ರಸಾರವನ್ನೇ ಸ್ಥಗಿತಗೊಳಿಸಿದೆ.
ಬ್ರಾಂಡ್ ಅನುಮೋದಿಸಲು ಬೈಜುಸ್‌ ಶಾರುಖ್ ಖಾನ್ ಗೆ ವಾರ್ಷಿಕವಾಗಿ 3- 4 ಕೋಟಿ ರೂ.ಗಳನ್ನು ಪಾವತಿಸುತ್ತದೆ ಎಂದು ಇಟಿ ವರದಿ ಮಾಡಿದೆ. ಕಳೆದ 2017 ರಿಂದಲೂ ಶಾರೂಖ್‌ ಖಾನ್‌ ಈ ಬ್ರಾಂಡ್ ನ ಬ್ರಾಂಡ್ ರಾಯಭಾರಿಯಾಗಿದ್ದರು.

ಪ್ರಮುಖ ಸುದ್ದಿ :-   ಅಪ್ರಾಪ್ತ ವಿದ್ಯಾರ್ಥಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮುಂಬೈ ಶಿಕ್ಷಕಿ...! ಆತಂಕ ನಿವಾರಕ ಮಾತ್ರೆಯನ್ನೂ ನೀಡುತ್ತಿದ್ದಳಂತೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement