ಕರ್ನಾಟಕದಲ್ಲಿ ಭಾನುವಾರ 406 ಜನರಿಗೆ ಕೊರೊನಾ ಹೊಸ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು (ಭಾನುವಾರ) ಹೊಸದಾಗಿ 406 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 10 ಮಂದಿ ಮೃತಪಟ್ಟಿದ್ದಾರೆ. ಇದೇವೇಳೆ 637 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,154 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಈವರೆಗೆ ಒಟ್ಟಾರೆ ಸೋಂಕಿತರ ಸಂಖ್ಯೆ 29,81,027 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,32,959 ಕ್ಕೆ ಹೆಚ್ಚಳವಾಗಿದೆ.
ಸೋಂಕಿನಿಂದ ಒಟ್ಟಾರೆ ಮೃತಪಟ್ಟವರ ಸಂಖ್ಯೆ 37,875 ಕ್ಕೆ ಹೆಚ್ಚಳವಾಗಿದೆ. ಬೀದರ್ ,ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ ಯಾವುದೇ ಸೋಂಕು ದೃಢಪಟ್ಟಿಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.35 ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ. 2.46ಕ್ಕೆ ಏರಿಕೆಯಾಗಿದೆ
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ 156 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 5 ಮಂದಿ ಮೃತಪಟ್ಡಿದ್ದಾರೆ. ಇದೇವೇಳೆ 229 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಹೊಸ ಸೋಂಕಿನ ಮಾಹಿತಿ..:
ಬಾಗಲಕೋಟೆ – 2, ಬಳ್ಳಾರಿ – 4, ಬೆಳಗಾವಿ -5, ಬೆಂಗಳೂರು ಗ್ರಾಮಾಂತರ- 5, ಬೆಂಗಳೂರು ನಗರ. – 156, ಬೀದರ್ -0, ಚಾಮರಾಜನಗರ – 2, ಚಿಕ್ಕಬಳ್ಳಾಪುರ – 0,
ಚಿಕ್ಕಮಗಳೂರು- 11, ಚಿತ್ರದುರ್ಗ – 2, ದಕ್ಷಿಣ ಕನ್ನಡ -238, ದಾವಣಗೆರೆ -4, ಧಾರವಾಡ -7, ಗದಗ – 0, ಹಾಸನ – 32, ಹಾವೇರಿ – 0, ಕಲಬುರಗಿ- 0, ಕೊಡಗು – 9,
ಕೋಲಾರ -4, ಕೊಪ್ಪಳ -0, ಮಂಡ್ಯ – 11, ಮೈಸೂರು -56, ರಾಯಚೂರು- 1, ರಾಮನಗರ -3, ಶಿವಮೊಗ್ಗ – 11, ತುಮಕೂರು -13, ಉಡುಪಿ – 18, ಉತ್ತರ ಕನ್ನಡ – 12, ವಿಜಯಪುರ – 0, ಯಾದಗಿರಿ- 0

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement