ದೆಹಲಿಯಲ್ಲಿ ಆಘಾತಕಾರಿ ಘಟನೆ : ಮಂಗ ಎಸೆದ ಇಟ್ಟಿಗೆಯಿಂದ ಮನುಷ್ಯನ ಪ್ರಾಣವೇ ಹೋಯಿತು..!

ನವದೆಹಲಿ: ಕೆಲವೊಮ್ಮೆ ನಮ್ಮ ಊಹೆಗೆ ನಿಲುಕದ ಘಟನೆಗಳು ನಡೆದು ಹೋಗುತ್ತವೆ. ಕೋತಿಯೊಂದು ಮನುಷ್ಯನನ್ನು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.ಅಂಥದ್ದೇ ಘಟನೆಯಲ್ಲಿ ದೆಹಲಿಯ ನಬಿ ಕರೀಂ ಪ್ರದೇಶದಲ್ಲಿ 30 ವರ್ಷದ ಮೊಹಮ್ಮದ್ ಕುರ್ಬಾನ್ ಎಂಬುವವರು ಕೋತಿಯಿಂದಾಗಿ ಮೃತಪಟ್ಟಿದ್ದಾರೆ. ತಲೆ ಮೇಲೆ ಕೋತಿ ಇಟ್ಟಿಗೆ ಎಸೆದದ್ದು ಅವರ ತಲೆಮೇಲೆ ಬಿದ್ದ ಪರಿಣಾಮ ಅವರು ಮೃತಪಟ್ಟಿದ್ದಾರೆ.
ಕಟ್ಟಡವನ್ನು ಏರಿ ಕುಳಿತಿದ್ದ ಕೋತಿಯೊಂದು ಎರಡನೇ ಮಹಡಿಯಿಂದ ಇಟ್ಟಿಗೆಯನ್ನು ಕೆಳಗೆ ಎಸೆದಿದೆ. ಅದು ಕೆಳಗೆ ನಿಂತಿದ್ದ ವ್ಯಕ್ತಿ ತಲೆ ಮೇಲೆ ಬಿದ್ದ ಪರಿಣಾಮ 30 ವರ್ಷದ ಮೊಹಮ್ಮದ್ ಕುರ್ಬಾನ್ ಎಂಬವರು ಮೃತಪಟ್ಟಿದ್ದಾರೆ.
ಈ ಪ್ರದೇಶದಲ್ಲಿ ಬ್ಯಾಗ್​ಗಳ ವ್ಯಾಪಾರ ಮಾಡುತ್ತಿದ್ದ ಕುರ್ಬಾನ್ ಅವರು ಮಂಗ ಎಸೆದ ಇಟ್ಟಿಗೆ ತಲೆ ಮೇಲೆ ಬಿದ್ದ ನಂತರ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಕೋತಿಗಳು ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್​ ಅನ್ನು ಕೋತಿಗಳು ತೆರೆಯಬಾರದು ಎಂದು ಮಾಡಬಾರದು ಎಂದು ಕಟ್ಟಡದ ಮಾಲೀಕರು ಅದರ ಮೇಲೆ ಇಟ್ಟಿಗೆಗಳನ್ನು ಹೇರಿದ್ದರು. ಆದರೆ ಅಲ್ಲಿಗೆ ಬಂದ ಮಂಗವೊಂದು ಅಲ್ಲಿದ್ದ ಇಟ್ಟಿಗೆ ತೆಗೆದು ಟ್ಯಾಂಕ್ ಮೇಲೆ ಹತ್ತಲು ನೋಡಿದೆ. ಆಗ ಇಟ್ಟಿಗೆ ಕೋತಿಯ ಕೈಯಿಂದ ಜಾರಿ ಕೆಳಗೆ ಬಿದ್ದಿದೆ. ದುರದೃಷ್ಟವಶಾತ್ ಆ ಇಟ್ಟಿಗೆ ಕಟ್ಟಡದ ಕೆಳ ಭಾಗದಲ್ಲಿ ನಿಂತಿದ್ದ ಕುರ್ಬಾನ್ ಅವರ ತಲೆ ಮೇಲೆಯೇ ಬಿದ್ದಿದ್ದರಿಂದ ಇಟ್ಟಿಗೆ ಬಡಿದ ರಭಸಕ್ಕೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಕೋತಿಗಳ ಗುಂಪು ನೀರಿನ ಟ್ಯಾಂಕ್ ಮೇಲಿಂದ ಎರಡು ಇಟ್ಟಿಗೆಗಳನ್ನು ತೆಗೆದಿದ್ದು, ಒಂದನ್ನು ಟೆರೇಸ್ ಮೇಲೆ ಎಸೆದಿವೆ. ಇನ್ನೊಂದು ಇಟ್ಟಿಗೆ ಕುರ್ಬಾನ್‌ ತಲೆಗೆ ಬಡಿದಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಂತರ ಬ್ರಹ್ಮೋಸ್ ಕ್ಷಿಪಣಿಗೆ ಬಂತು ಭಾರೀ ಬೇಡಿಕೆ ; ಖರೀದಿಸಲು 17 ದೇಶಗಳು ಕ್ಯೂನಲ್ಲಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement