ಒಂದೂವರೆ ವರ್ಷದಲ್ಲಿ ಲೀಟರ್​ಗೆ ಪೆಟ್ರೋಲ್ 36 ರೂ., ಡೀಸೆಲ್ 26.58 ರೂ. ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ ನಾಲ್ಕನೇ ದಿನವಾದ ಶನಿವಾರ ಸಹ ಲೀಟರ್‌ಗೆ 35 ಪೈಸೆಗಳಷ್ಟು ಏರಿಕೆಯಾಗಿದ್ದು, 18 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಪೆಟ್ರೋಲ್‌ನ ಮೇಲಿನ ದರ ಲೀಟರ್‌ಗೆ 36 ರೂಪಾಯಿ ಮತ್ತು ಡೀಸೆಲ್‌ನ ಮೇಲೆ 26.58 ರೂಪಾಯಿ ಏರಿಕೆ ಆಗಿದೆ. ಎಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಈಗ ಲೀಟರ್‌ಗೆ 100 ರೂ.ಗಳಿಗಿಂತ ಹೆಚ್ಚಾಗಿದೆ. ಡೀಸೆಲ್ ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಲ್ಲಿ ನೂರು ರೂಪಾಯಿಯ ಗಡಿಯನ್ನು ದಾಟಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 107.24 ರೂ.ಮತ್ತು ಡೀಸೆಲ್ ಬೆಲೆ 95.97 ರೂ. ಆಗಿದೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಲೀಟರ್​ಗೆ ಕ್ರಮವಾಗಿ 115.90 ರೂಪಾಯಿ ಮತ್ತು 105.27 ರೂಪಾಯಿ ಮುಟ್ಟಿದೆ. ಅಬಕಾರಿ ಸುಂಕವನ್ನು ದಾಖಲೆ ಮಟ್ಟಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದ ದಿನ ಮೇ 5, 2020ರಿಂದ ಈಚೆಗೆ ಒಟ್ಟು ಬೆಲೆ ಏರಿಕೆಯು ಇಲ್ಲಿಯವರೆಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 35.98 ರೂ. ಮತ್ತು ಡೀಸೆಲ್‌ಗೆ 26.58 ರೂ. ಹೆಚ್ಚಳವಾಗಿದೆ.
ಇಂಧನ ಬೆಲೆಗಳ ಹೆಚ್ಚಳವು ಹಣದುಬ್ಬರದ ಮೇಲೆ ಕಳವಳವನ್ನು ಉಂಟುಮಾಡಿದೆ. ಏಕೆಂದರೆ ಡೀಸೆಲ್ ಕೃಷಿ ಸರಕುಗಳನ್ನು ಒಳಗೊಂಡಂತೆ ಸರಕುಗಳನ್ನು ಸಾಗಿಸಲು ಬಳಸುವ ಮುಖ್ಯ ಇಂಧನವಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement