2ನೇ ಡೋಸ್ ಕೋವಿಡ್ ಲಸಿಕೆ ತಪ್ಪಿಸಿಕೊಂಡ 11 ಕೋಟಿ ಜನರು: ನಾಳೆ ರಾಜ್ಯ ಆರೋಗ್ಯ ಸಚಿವರ ಸಭೆ ಕರೆದ ಕೇಂದ್ರ

ನವದೆಹಲಿ: 11 ಕೋಟಿ ಜನರು ತಮ್ಮ ಎರಡನೇ ಡೋಸ್ ಕೋವಿಡ್ ಲಸಿಕೆ ತಪ್ಪಿಸಿಕೊಂಡಿದ್ದಾರೆ ಅಥವಾ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಜ್ಯ ಆರೋಗ್ಯ ಸಚಿವರ ಸಭೆ ಕರೆದಿದ್ದಾರೆ.
ದೇಶದ ವಯಸ್ಕ ಜನಸಂಖ್ಯೆಯ ಶೇ. 76ಕ್ಕಿಂತ ಹೆಚ್ಚು ಜನರು ಈಗ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಆದರೆ ಎರಡೂ ಡೋಸ್ ಲಸಿಕೆ ಪಡೆದ ಜನರ ಸಂಖ್ಯೆ ಶೆ. 32ಕ್ಕಿಂತ ಸ್ವಲ್ಪ ಹೆಚ್ಚಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಇದುವರೆಗೆ 107 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸರಬರಾಜು ಮಾಡಿದ್ದು, 12.37 ಕೋಟಿಗೂ ಹೆಚ್ಚು ಡೋಸ್ ಇನ್ನೂ ರಾಜ್ಯಗಳಲ್ಲಿ ಲಭ್ಯವಿದೆ.
ದೇಶಾದ್ಯಂತ 11 ಕೋಟಿ ಮಂದಿ ನಿಗದಿತ ಅವಧಿ ಮುಗಿದರೂ ತಮ್ಮ ಎರಡನೇ ಡೋಸ್ ಲಸಿಕೆ ಪಡೆದಿಲ್ಲ. ಹೀಗಾಗಿ ಕೇಂದ್ರ ಆರೋಗ್ಯ ಸಚಿವರು ಬುಧವಾರ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದಿದ್ದು, ಲಸಿಕೆ ಫಲಾನುಭವಿಗಳಿಗೆ ಸಂಪೂರ್ಣ ಎರಡೂ ಡೋಸ್ ಖಚಿತಪಡಿಸಿಕೊಳ್ಳಲು ಇರುವ ಅಡೆತಡೆಗಳ ಬಗ್ಗೆ ಚರ್ಚಿಸಲಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್ 23 ರಂದು ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಬಿಡುಗಡೆ

ಮಿಷನ್ ಮೋಡ್‌ನಲ್ಲಿ ಲಸಿಕೆಗಳನ್ನು ತೆಗೆದುಕೊಳ್ಳಲು ಎಲ್ಲಾ ರಾಜ್ಯಗಳನ್ನು ಒತ್ತಾಯಿಸುವುದು ಬುಧವಾರದ ಸಭೆಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ. ವಿವಿಧ ವ್ಯಾಕ್ಸಿನೇಷನ್ ಅಭಿಯಾನಗಳನ್ನು ಪ್ರೋತ್ಸಾಹಿಸಲು ಮತ್ತು ‘ಎಲ್ಲರಿಗೂ ವ್ಯಾಕ್ಸಿನೇಷನ್’ ಎಂಬ ಪ್ರಧಾನ ಮಂತ್ರಿಯ ದೃಷ್ಟಿಕೋನವನ್ನು ಮುಂದುವರಿಸಲು ರಾಜ್ಯಗಳನ್ನು ಕೇಳಲಾಗುತ್ತದೆ.
ಅಕ್ಟೋಬರ್ 21 ರಂದು ಭಾರತವು 100 ಕೋಟಿ ಲಸಿಕೆ ಮೈಲಿಗಲ್ಲು ದಾಟಿದೆ. ಈಗ ಸರ್ಕಾರದ ಆದ್ಯತೆಯು ಎರಡನೇ ಡೋಸ್ ಪಡೆದವರು ಮತ್ತು ಸಂಪೂರ್ಣವಾಗಿ ರೋಗನಿರೋಧಕವನ್ನು ಪಡೆದವರ ಅಂತರವನ್ನು ಕಡಿಮೆ ಮಾಡುವುದಕ್ಕೆ ಹೆಜ್ಜೆ ಇಡುತ್ತಿದೆ. ಅಂದರೆ ಎರಡು ಡೋಸ್ ಪಡೆಯಲು ಒತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement