ಅಪ್ಪನ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ; ಪುನೀತ ರಾಜಕುಮಾರ ತಲೆ ಸವರಿ ಅತ್ತ ಮಗಳು

ಬೆಂಗಳೂರು: ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪುನೀತರಾಜಕುಮಾರ ಅವರ ಹಿರಿಯ ಮಗಳು ಧೃತಿಗೆ ತಂದೆ ಪುನೀತ್‌ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ತಂದೆ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ವಿಮಾನದಲ್ಲಿ 24 ಗಂಟೆಗೂ ಅಧಿಕ ಕಾಲ ಪ್ರಯಾಣ ಬೆಳೆಸಿ ಬೆಂಗಳೂರು ತಲುಪಿದ ಅವರು ಸದಾಶಿವ ನಗರ ತಮ್ಮ ನಿವಾಸಕ್ಕೆ ತೆರಳಿ ಅಲ್ಲಿಂದ ಅವರು ಕಂಠೀರವ ಸ್ಟೇಡಿಯಂ ತಲುಪಿದರು. ಅವರ ಜೊತೆಗೆ ತಾಯಿ ಅಶ್ವಿನಿ ಹಾಗೂ ದೊಡ್ಡಪ್ಪ ರಾಘವೇಂದ್ರ ರಾಜಕುಮಾರ ಇದ್ದರು. ಅಪ್ಪನ ಪಾರ್ಥಿವ ಶರೀರ ನೋಡುತ್ತಲೇ ಭಾವುಕರಾದ ಧೃತಿ ಅಪ್ಪನ ತಲೆ ಸವರಿ ಕಣ್ಣೀರು ಹಾಕಿದ್ದಾರೆ. ನಂತರ ಧೃತಿ ಅಮ್ಮನ್ನು ತಬ್ಬಿಕೊಂಡು ಕಂಡು ಕಣ್ಣೀರು ಹಾಕಿದರು‌.
ಈ ವೇಳೆ ದೊಡ್ಡಪ್ಪ ಶಿವರಾಜ್​ಕುಮಾರ್​ ಅವರು ಧೃತಿಯನ್ನು ಸಂತೈಸುವ ಪ್ರಯತ್ನ ಮಾಡಿದರು.
ಧೃತಿ ಅವರು ಇಂದು (ಅಕ್ಟೋಬರ್​ 30) ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು ಸಂಜೆ 4 ಗಂಟೆ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧೃತಿ ಆಗಮಿಸಿದರು. ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಅವರು ಅಮೆರಿಕಕ್ಕೆ ತೆರಳಿದ್ದರು.

ಪ್ರಮುಖ ಸುದ್ದಿ :-   ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ನಂತರ ಮುಂಬೈನಲ್ಲಿ ಪತ್ತೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement