ಪಂಜಾಬ್ ಲೋಕ ಕಾಂಗ್ರೆಸ್: ತಮ್ಮ ಪಕ್ಷದ ಹೆಸರು ಘೋಷಣೆ ಮಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್

ಚಂಡೀಗಡ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಂಗಳವಾರ ತಮ್ಮ ಹೊಸ ಪಕ್ಷದ ಹೆಸರನ್ನು ಪ್ರಕಟಿಸಿದ್ದಾರೆ.
ಅವರು ತಮ್ಮ ಪಕ್ಷದ ಹೆಸರು ಪಂಜಾಬ್ ಲೋಕ ಕಾಂಗ್ರೆಸ್ ಎಂದು ಬಹಿರಂಗಪಡಿಸಿದ್ದಾರೆ. ಪಕ್ಷದ ನೋಂದಣಿಯು ಭಾರತದ ಚುನಾವಣಾ ಆಯೋಗದ ಅನುಮೋದನೆಗೆ ಬಾಕಿ ಇದೆ.
ಮಂಗಳವಾರ ಚಂಡೀಗಡದಲ್ಲಿ ಪಕ್ಷದ ಹೆಸರನ್ನು ಬಹಿರಂಗಪಡಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, “ನಾವು ನಮ್ಮದೇ ಆದ ಪಕ್ಷವನ್ನು ರಚಿಸುವುದಾಗಿ ಮೊದಲೇ ಘೋಷಿಸಿದ್ದರಿಂದ, ನಮ್ಮ ವಕೀಲರ ತಂಡವು ಪ್ರಕ್ರಿಯೆಯಲ್ಲಿ ಕೆಲಸ ಮಾಡುತ್ತಿದೆ ಮತ್ತು ನೋಂದಣಿಗಾಗಿ ಭಾರತದ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ
ಎಂದು ತಿಳಿಸಿದರು. ಪ್ರಸ್ತಾವಿತ ಹೆಸರಿಗೆ ಚುನಾವಣಾ ಆಯೋಗದ ಅಭ್ಯಂತರವಿಲ್ಲ ಎಂದರು.
ಪಕ್ಷದ ಚಿಹ್ನೆಯ ಬಗ್ಗೆ ಮಾತನಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಚುನಾವಣಾ ಆಯೋಗವು ಮೂರು ಚಿಹ್ನೆಗಳನ್ನು ನೀಡಿದ್ದು, ಅದರಲ್ಲಿ ಒಂದನ್ನು ಆಯ್ಕೆ ಮಾಡಬೇಕು. ತಮ್ಮ ಪಕ್ಷವು ಮೂರು ವಿಭಿನ್ನ ಚಿಹ್ನೆಗಳನ್ನು ಸಲ್ಲಿಸಿದೆ ಮತ್ತು ಅಂತಿಮ ಚಿಹ್ನೆಯನ್ನು ಆರು ಚಿಹ್ನೆಗಳ ಗುಂಪಿನಿಂದ ಆಯ್ಕೆ ಮಾಡಲಾಗುತ್ತದೆ – ಮೂರು ಚುನಾವಣಾ ಆಯೋಗವು ಸೂಚಿಸಿದೆ ಮತ್ತು ಮೂರನ್ನು ಪಕ್ಷವು ಪ್ರಸ್ತಾಪಿಸಿದೆ ಎಂದು ಅವರು ಹೇಳಿದರು.
ನಂತರ ಪಕ್ಷವನ್ನು ಔಪಚಾರಿಕವಾಗಿ ಪ್ರಾರಂಭಿಸಲಾಗುವುದು. ಪಕ್ಷ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಪಕ್ಷದ ನೀತಿಗಳು, ಕಾರ್ಯಕ್ರಮಗಳು, ಕಾರ್ಯಸೂಚಿ ಮತ್ತು ದೃಷ್ಟಿಯನ್ನು ವಿವರಿಸಲಾಗುವುದು ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದರು.

ಪ್ರಮುಖ ಸುದ್ದಿ :-   ನೀವು ಭಾರತದಲ್ಲಿ ಆಪಲ್ ಸಾಧನ ಉತ್ಪಾದನೆ ಮಾಡ್ಬೇಡಿ..; ಆಪಲ್ ಸಿಇಒಗೆ ಡೊನಾಲ್ಡ್ ಟ್ರಂಪ್ ಒತ್ತಡ : ಅಮೆರಿಕ ವರಸೆ ಬದಲಿಸಿದ್ದು ಯಾಕೆ..?

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement