ಬೆಂಗಳೂರು: ಪುನೀತ್ ರಾಜಕುಮಾರ್ ನಿಧನದಿಂದ ಆಘಾತಗೊಂಡಿರುವ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುಕ್ಕೆ ಆತಂಕ ವ್ಯಕ್ತಪಡಿಸಿರುವ ರಾಘವೇಂದ್ರ ರಾಜಕುಮಾರ ದಯವಿಟ್ಟು ಅಂತಹ ಕೆಲಸಕ್ಕೆ ಯಾರೂ ಮುಂದಾಗಬೇಡಿ ಎಂದು ಮನವಿ ಮಾಡಿದ್ದಾರೆ. ‘‘
ಅಪ್ಪಾಜಿಯವರು ಅಭಿಮಾನಿಗಳನ್ನು ದೇವರು ಎಂದಿದ್ದಾರೆ. ದೇವರು ಇಂತಹ ಕೆಲಸ ಮಾಡಿದರೆ ಜನಕ್ಕೆ ಏನು ಹೇಳುತ್ತೀರಾ?ಆತ್ಮಹತ್ಯೆ ಮಾಡಿಕೊಳ್ಳುವುದು ಬಹಳ ದೊಡ್ಡ ತಪ್ಪು. ನಿಮ್ಮ ಹಿಂದೆ ಕುಟುಂಬದ ಬಗ್ಗೆ ಯೋಚಿಸಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಪುನೀತ್ ಪತ್ನಿ ಹಾಗೂ ಕುಟುಂಬಸ್ಥರು ಇದರಿಂದ ತೀವ್ರ ನೊಂದುಕೊಂಡಿದ್ದಾರೆ. ಪುನೀತ ಅವರ ನಿಧನ ಇಷ್ಟು ಜನರ ಸಾವಿಗೆ ಕಾರಣವಾಗಿದ್ದಕ್ಕೆ ಎಲ್ಲರಿಗೂ ಅಪಾರ ನೋವಾಗಿದೆ. ದಯವಿಟ್ಟು ಯಾರೂ ಅಂತಹ ನಿರ್ಧಾರ ತೆಗೆದುಕೊಳ್ಳಬಾರದು ಎಂದು ರಾಘವೇಂದ್ರ ರಾಜಕುಮಾರ ಮನವಿ ಮಾಡಿದ್ದಾರೆ.
ಅಭಿಮಾನಿಗಳಿಂದಲೇ ನಾವು. ಯಾರು ಬಂದರೂ ಅವರನ್ನು ಗೌರವಿಸುವುದು, ಅವರ ಪ್ರೀತಿಗೆ ನಾವು ನಮಸ್ಕರಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ