ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಮುಂಬೈ ಸೆಷನ್ಸ್ ನ್ಯಾಯಾಲಯವು ಶನಿವಾರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹೆಚ್ಚುವರಿ ತನಿಖೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಒಂಬತ್ತು ದಿನಗಳ ಕಸ್ಟಡಿಗೆ ಕೋರಿದ್ದರೆ, ನ್ಯಾಯಾಲಯ ಅದನ್ನು ನಿರಾಕರಿಸಿದೆ. 12 ಗಂಟೆಗಳ ತನಿಖೆಯ ನಂತರ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 73 ವರ್ಷದ ಎನ್‌ಸಿಪಿ ನಾಯಕನನ್ನು ಕಳೆದ ಸೋಮವಾರ ಇಡಿ ಬಂಧಿಸಿತ್ತು.
ಸೋಮವಾರ, ಅನಿಲ್ ದೇಶಮುಖ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು ಮತ್ತು ನಂತರ ನವೆಂಬರ್ 6 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಯಿತು. ತನಿಖೆಯ ಸಂದರ್ಭದಲ್ಲಿ, ದೇಶ್‌ಮುಖ್ ಅವರ ಕುಟುಂಬದ 13 ಕಂಪನಿಗಳು ಮತ್ತು ಅವರ ಸಹಚರರಿಂದ ನಿಯಂತ್ರಿಸಲ್ಪಡುವ ಇನ್ನೂ 14 ಕಂಪನಿಗಳು ಅನಿಲ್ ದೇಶಮುಖ್ ಅವರ ಅಕ್ರಮ ಸಂಪಾದನೆಯ ಉದ್ದೇಶಕ್ಕಾಗಿ ಬಳಸಲ್ಪಟ್ಟಿವೆ ಎಂದು ಇಡಿ ಹೇಳಿಕೊಂಡಿದೆ. ಮುಂಬೈ ಮಾಜಿ ಪೊಲೀಸ್ ಆಯಕ್ತ ಪರಮ್ ಬೀರ್ ಸಿಂಗ್ ಅವರ 100 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಆರೋಪವನ್ನು ಉಲ್ಲೇಖಿಸಿ.ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಾಜಿ ಮಹಾರಾಷ್ಟ್ರ ಗೃಹ ಸಚಿವರು ಕೂಡ ‘ನೇರವಾಗಿ ಭಾಗಿಯಾಗಿದ್ದಾರೆ’ ಎಂದು ಇಡಿ ಹೇಳಿದೆ.
ಇದಲ್ಲದೆ, ಅವರ ಮಗ ಹೃಷಿಕೇಶ್ ದೇಶಮುಖ್ ಅವರನ್ನೂ ಇಡಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿಚಾರಣೆಗೆ ಕರೆದಿದೆ. ಬಂಧನದ ಭೀತಿಯಿಂದ ಹೃಷಿಕೇಶ್ ಮುಂಬೈ ಸೆಷನ್ಸ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಇಡಿ ಮುಂದೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿದ್ದಾರೆ. ಏಜೆನ್ಸಿ ಈಗಾಗಲೇ ದೇಶಮುಖ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ರೂ.4.2 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ. 4 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಂಜೀವ್ ಪಲಾಂಡೆ – ದೇಶಮುಖ್ ಅವರ ಆಪ್ತ ಕಾರ್ಯದರ್ಶಿ, ಕುಂದನ್ ಶಿಂಧೆ (ದೇಶಮುಖ್ ಅವರ ಆಪ್ತ ಸಹಾಯಕ) ಅವರನ್ನು ಸಹ ಬಂಧಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ