ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಬೈ ಶೇಖ್ ಉಡುಪಿನಲ್ಲಿ ಸಖತ್ ಮಿಂಚಿದ್ದಾರೆ, ಡ್ರೆಸ್ ಧರಿಸಿ ಫೋಟೋ ಪೋಸ್ ಸಹ ನೀಡಿದ್ದಾರೆ.[ ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ಎಂಬುವವರ ಮನೆಗೆ ತೆರಳಿದ್ದ ವೇಳೆಯಲ್ಲಿ ಸಿದ್ದರಾಮಯ್ಯ ಅವರಿಗೆ ದುಬೈ ಶೇಖ್ ಉಡುಪು ತೊಡಿಸಲಾಯಿತು. ಅವರ ಒತ್ತಾಯಕ್ಕೆ ಮಣಿಸದ ಸಿದ್ದರಾಮಯ್ಯ ದುಬೈ ಶೇಖ್ ಡ್ರೆಸ್ ಧರಿಸಿದರು.
ಇದು ನಡೆದದ್ದು ಮಂಡ್ಯದಲ್ಲಿ. ಮಂಡ್ಯದ ಹಿರಿಯ ಕಾಂಗ್ರೆಸ್ ಮುಖಂಡ ಮುನಾವರ್ ಖಾನ್ ಮನೆಗೆ ಭೇಟಿ ನೀಡಿದ್ದರು, ಅಲ್ಲಿ ಅವರಿಗೆ ಮುನಾವರ್ ಬೆಂಬಲಿಗರು ದುಬೈ ಶೇಖ್ ಹಾಕುವ ಉಡುಗೆಯನ್ನು ಉಡುಗೊರೆಯಾಗಿ ನೀಡಿದರಲ್ಲದೆ, ಅದನ್ನು ಸಿದ್ದರಾಮಯ್ಯ ಅವರಿಗೆ ತೊಡಿಸಿದ್ದಾರೆ. ಆನಂದ ಪಟ್ಟರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕೂಡ ಉಡುಪು ತೊಟ್ಟು ಆನಂದಿಸಿ ಫೋಟೊಗೆ ಪೋಸ್ ಕೊಟ್ಟರು.
ನಿಮ್ಮ ಕಾಮೆಂಟ್ ಬರೆಯಿರಿ