ಹೈದರಾಬಾದ್: ತೆಲುಗು ಮತ್ತು ತಮಿಳು ಚಲನಚಿತ್ರ ರಂಗದ ಜನಪ್ರಿಯ ನೃತ್ಯ ಸಂಯೋಜಕ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಶಿವಶಂಕರ್ ( 72 ವರ್ಷ), ಕೋವಿಡ್-19 ಸೋಂಕಿನಿಂದ ನವೆಂಬರ್ 28, ಭಾನುವಾರ ನಿಧನರಾಗಿದ್ದಾರೆ.
ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಈ ಹಿಂದೆ, ಶಿವಶಂಕರ ಅವರ ಮಗ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ ನಂತರ. ಚಿರಂಜೀವಿ, ಧನುಷ್ ಮತ್ತು ಸೋನು ಸೂದ್ ಸೇರಿದಂತೆ ಚಿತ್ರರಂಗದ ಹಲವಾರು ನಟರು ಶಿವಶಂಕರ್ ಅವರ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಿದ್ದರು,
40 ವರ್ಷಗಳ ತಮ್ಮ ವೃತ್ತಿಜೀವನದ ಮೂಲಕ, ಶಿವಶಂಕರ್ ನೂರಾರು ಚಲನಚಿತ್ರಗಳಿಗೆ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅವರ ಅತ್ಯಂತ ಗಮನಾರ್ಹ ಕೃತಿಗಳಲ್ಲಿ ಸೂರ್ಯವಂಶಂ, ಪೂವೆ ಉನಕ್ಕಾಗ, ತಿರುಡಾ ತಿರುಡಿ, ಮತ್ತು ಇತ್ತೀಚೆಗೆ, ಬಾಹುಬಲಿ: ದಿ ಬಿಗಿನಿಂಗ್ ಚಿತ್ರಗಳು. ಅವರು 1996, 2003, 2006 ಮತ್ತು 2008 ರಲ್ಲಿ ಪೂವೆ ಉನಕ್ಕಾಗ, ವಿಶ್ವ ತುಳಸಿ, ವರಲರು ಮತ್ತು ಉಳಿಯಿನ್ ಒಸೈ ಚಿತ್ರಗಳಿಗಾಗಿ ಅತ್ಯುತ್ತಮ ನೃತ್ಯ ನಿರ್ದೇಶಕರ ವಿಭಾಗದಲ್ಲಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. ಎಸ್.ಎಸ್. ರಾಜಮೌಳಿ ನಿರ್ದೇಶನದ ಮಗಧೀರದಲ್ಲಿನ ಅವರ ಕೆಲಸಕ್ಕಾಗಿ ಅವರು 2008 ರಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು. ಮತ್ತು ಚಿತ್ರದ ಧೀರ ಧೀರ ಧೀರ ಹಾಡಿಗೆ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದರು.
ನೃತ್ಯ ಸಂಯೋಜಕರಾಗಿ ಹೆಸರಾಗಿದ್ದಲ್ಲದೆ, ಶಿವಶಂಕರ್ ಅವರು ಕೆಲವು ಸಂದರ್ಭಗಳಲ್ಲಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಗಮನಾರ್ಹವಾಗಿ, ಅವರು 2006 ರ ವರಲರು ಚಿತ್ರದಲ್ಲಿ ಅಜಿತ್ ಅವರ ನೃತ್ಯ ಬೋಧಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು 2013 ರ ತಮಿಳು ಚಲನಚಿತ್ರ ಪರದೇಸಿಯಲ್ಲಿ ಕ್ರಿಶ್ಚಿಯನ್ ಮಿಷನರಿ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ.
ಶಿವಶಂಕರ್ ನಿಧನಕ್ಕೆ ಚಿತ್ರರಂಗದ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ. ಶಿವಶಂಕರ್ ಮಾಸ್ಟರ್ಜಿ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರನ್ನು ಉಳಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆ ಆದರೆ ದೇವರಿಗೆ ಬೇರೆ ಯೋಜನೆಗಳಿದ್ದವು. ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಮಾಸ್ಟರ್ಜಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ. ಸಿನಿಮಾ ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತದೆ ಸರ್ ಎಂದು ಸೂನ್ ಸೂದ್ ತಮ್ಮ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.
ಮಗಧೀರ ಚನಚಿತ್ರದಲ್ಲಿ ಶಿವಶಂಕರ್ ಅವರೊಂದಿಗೆ ಕೆಲಸ ಮಾಡಿದ ನಿರ್ದೇಶಕ ರಾಜಮೌಳಿ, ನೃತ್ಯ ನಿರ್ದೇಶಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಖ್ಯಾತ ನೃತ್ಯ ನಿರ್ದೇಶಕ ಶಿವಶಂಕರ ಮಾಸ್ಟರ್ ಅವರು ನಿಧನರಾಗಿದ್ದಾರೆಂದು ತಿಳಿದು ದುಃಖವಾಗುತ್ತಿದೆ. ಮಗಧೀರ ಚಿತ್ರಕ್ಕೆ ಅವರೊಂದಿಗೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.
ನಟ ಪ್ರಭುದೇವ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. “ಶಿವಶಂಕರ ಮಾಸ್ಟರಜಿಯವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಂತಾಪಗಳು, ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದ್ದಾರೆ.
ಚಿರಂಜೀವಿ, ವೆಂಕಟ ಪ್ರಭು ಮತ್ತು ವಿಜಯ್ ಸೇತುಪತಿ ಸೇರಿದಂತೆ ಇತರ ಗಣ್ಯರು ಶಿವಶಂಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ