ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ (ನವೆಂಬರ್ 29) ರಿಲಯನ್ಸ್ ಕ್ಯಾಪಿಟಲ್ ಮಂಡಳಿಯನ್ನು ರದ್ದುಗೊಳಿಸಿದ್ದು, ವಿವಿಧ ಪಾವತಿ ಹೊಣೆಗಾರಿಕೆಗಳು ಮತ್ತು “ಗಂಭೀರ” ಆಡಳಿತ ಸಮಸ್ಯೆಗಳನ್ನು ಕಂಪನಿಯು ನಿರ್ವಹಿಸಿಲ್ಲ ಎಂದು ಹೇಳಿದೆ.
ಆರ್‌ಬಿಐ ಕಾಯಿದೆಯ ಸೆಕ್ಷನ್ 45-IE (2) ಅಡಿಯಲ್ಲಿ ಅನಿಲ್ ಅಂಬಾನಿ ನಿಯಂತ್ರಿತ ಕಂಪನಿಯ ನಿರ್ವಾಹಕರಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್ ವೈ ಅವರನ್ನು ನೇಮಿಸಿದೆ. ದಿವಾಳಿತನ ನಿಯಮಗಳು, 2019 ರ ಅಡಿಯಲ್ಲಿ ಕಂಪನಿಯ ಪರಿಹಾರ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಆರ್‌ಬಿಐ ತಿಳಿಸಿದೆ.
ಕಳೆದ ವರ್ಷ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಮತ್ತು ಆಕ್ಸಿಸ್ ಬ್ಯಾಂಕ್‌ನಿಂದ ಪಡೆದ 624 ಕೋಟಿ ರೂಪಾಯಿಗಳ ಸಾಲದ ಮೇಲಿನ ಬಡ್ಡಿ ಪಾವತಿಯಲ್ಲಿ ರಿಲಯನ್ಸ್ ಕ್ಯಾಪಿಟಲ್ ಡೀಫಾಲ್ಟ್ ಮಾಡಿರುವುದು ಇಲ್ಲಿ ಉಲ್ಲೇಖಿಸಬೇಕಾದ ಅಂಶವಾಗಿದೆ. ಕಂಪನಿಯು ಅಕ್ಟೋಬರ್ 31ರಂತೆ ಬಡ್ಡಿ ಪಾವತಿಗೆ ಸಂಬಂಧಿಸಿದಂತೆ HDFC ಗೆ 4.77 ಕೋಟಿ ರೂ. ಮತ್ತು ಆಕ್ಸಿಸ್ ಬ್ಯಾಂಕ್‌ಗೆ 0.71 ಕೋಟಿ ರೂ. ಡೀಫಾಲ್ಟ್ ಮಾಡಿದೆ.
ರಿಲಯನ್ಸ್ ಕ್ಯಾಪಿಟಲ್ ಎಚ್‌ಡಿಎಫ್‌ಸಿಯಿಂದ ಆರು ತಿಂಗಳಿಂದ ಏಳು ವರ್ಷಗಳ ಅವಧಿಗೆ 10.6%-13% ಮತ್ತು ಆಕ್ಸಿಸ್‌ನಿಂದ 8.25% ಗೆ 3-7 ವರ್ಷಗಳ ಅವಧಿಗೆ ಸಾಲವನ್ನು ಪಡೆದಿದೆ.
ರಿಲಯನ್ಸ್ ಕ್ಯಾಪಿಟಲ್ ನ್ಯಾಯಾಲಯದ ಆದೇಶದ ನಂತರ ಯಾವುದೇ ಆಸ್ತಿಯನ್ನು ವಿಲೇವಾರಿ ಮಾಡಿ ಕಂಪನಿಗೆ ಹಣಗಳಿಸಲು ಸಾಧಯವಾಗುತ್ತಿಲ್ಲ. ಹಾಗಾಗಿ ಸಾಲ ಪಾವತಿಯಲ್ಲಿ ವಿಳಂಬವಾಗಿದೆ ಎಂದು ವಿನಿಮಯ ಕೇಂದ್ರಗಳಿಗೆ ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ