ಹುಬ್ಬಳ್ಳಿ: ಶ್ರೀ ಸಿದ್ದಾರೂಢರ ಹಾಗೂ ಶ್ರೀ ಗುರುನಾಥರೂಢರ ಮೂರ್ತಿಗೆ ಅಲಂಕಾರ ಹಾಗೂ ಪೂಜೆ ಸಲ್ಲಿಸಲು ಹೋದ ಯುವಕನೊಬ್ಬ ಸಿದ್ಧಾರೂಢ ಮಠದ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತನನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಉಮೇಶಪ್ಪ ಜಾಲಿಹಾಳ (21) ಎಂದು ಗುರುತಿಸಲಾಗಿದೆ.
ಇಂದು, ಮಂಗಳವಾರ ಬೆಳಗ್ಗೆ ಮಠದ ಕೆರೆಯ ಮಧ್ಯದಲ್ಲಿರುವ ಸಿದ್ದಾರೂಢ ಹಾಗೂ ಗುರುನಾಥ ರೂಢ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಮೂವರು ಈಜಿಕೊಂಡು ಹೋಗಿದ್ದಾರೆ. ಇವರು ಇದನ್ನು ಆಗಾಗ ಹೀಗೆ ಹೋಗಿ ಪೂಜೆ ಮಾಡುತ್ತಿದ್ದರಂತೆ. ಆದರೆ ಇಂದು ಅಸ್ವಸ್ಥಗೊಂಡು ಮುಳುಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಕಾರ್ಯಚರಣೆ ನಡೆಸಿ ಯುವಕನ ಶವ ಹೊರ ತೆಗೆದಿದ್ದಾರೆ.ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ