ಬೆಂಗಳೂರು: ಏರ್ಪೋರ್ಟ್ಗಳಲ್ಲಿ ಕೋವಿಡ್ ಪರೀಕ್ಷೆಗಳಿಗೆ ಸರ್ಕಾರ ದರ ನಿಗದಿ ಮಾಡಿದೆ. ಐಸಿಎಂಆರ್ (ICMR) ಪ್ರಮಾಣಿತ ಕೋವಿಡ್ ಪರೀಕ್ಷೆಗಳಿಗೆ ದರ ನಿಗದಿ ಮಾಡಿ ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಆರ್ಟಿಪಿಸಿಆರ್ ಟೆಸ್ಟ್ಗೆ 500 ರೂಪಾಯಿ ಹಾಗೂ ಅಬಾಟ್ ಐಡಿ ಟೆಸ್ಟ್ಗೆ 3,000 ರೂಪಾಯಿ ನಿಗದಿ ಮಾಡಲಾಗಿದೆ. ಥರ್ಮೋ ಫಿಶರ್ ಅಕ್ಯುಲಾ ಟೆಸ್ಟ್ಗೆ 1,500 ರೂಪಾಯಿ, ಟಾಟಾ ಎಂಡಿ3 ಜೆನ್ ಫಾಸ್ಟ್ ಟೆಸ್ಟ್ಗೆ 1,200 ರೂಪಾಯಿ ಹಾಗೂ ಸೆಫೀಡ್ಸ್ಜೀನ್ ಎಕ್ಸ್ಪರ್ಟ್ ಟೆಸ್ಟ್ಗೆ 2,750 ರೂಪಾಯಿ ನಿಗದಿಪಡಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಇಂದು (ಡಿ. 7) ಹೊಸದಾಗಿ 299 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,98,699 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ ಹಾಗೂ 7,100 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ