ಕಾರವಾರ: ಪೊಲೀಸ್ ಕಾನ್ಸಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಮೃತರನ್ನು ಗುರುಪ್ರಸಾದ್ ನಾಯ್ಕ (35) ಎಂದು ಗುರುತಿಸಲಾಗಿದ್ದು, ಇವರು ಡಿ.ಆರ್.ಪೊಲೀಸ್ ಪೇದೆಯಾಗಿದ್ದಾರೆ. ಕಾರವಾರದ ಡಿ.ಎ.ಆರ್ ಕಚೇರಿಯಲ್ಲಿ ಇಂದು ಕರ್ತವ್ಯಕ್ಕೆ ಹಾಜರಾದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಾಲ್ಕು ದಿನದ ಹಿಂದೆ ರಜೆಯ ಮೇಲೆ ಅವರು ತಮ್ಮ ಗ್ರಾಮವಾದ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರಕ್ಕೆ ತೆರಳಿದ್ದರು. ನಂತರ ಇಂದು ಕಚೇರಿಗೆ ಹಾಜರಾಗಿದ್ದರು. ನಂತರ ಪೊಲೀಸ್ ನೌಕರರ ಸಹಕಾರಿ ಸಂಘದ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಗುರುಪ್ರಸಾದ್ ನಾಯ್ಕ ಅವರು ಡಿ.ಎ.ಆರ್ ಪೊಲೀಸ್ ತರಬೇತಿ ಶಾಲೆಯಲ್ಲಿ ಶಿಕ್ಷಕರಾಗಿ ಸಹ ಕಾರ್ಯನಿರ್ವಹಿಸುತ್ತಿದ್ದ ಇವರು ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚು ಹೆಸರು ಗಳಿಸಿದ್ದರು.
ಇವರ ಆತ್ಮಹತ್ಯೆಗೆ ಯಾವುದೇ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ