ಮಗಳ ಸಾವಿನಿಂದ ಮನನೊಂದು ಅಳಿಯನ ಮನೆ ಮುಂದೆ ಎಡೆಯಿಟ್ಟು ಆತ್ಮಹತ್ಯೆ ಮಾಡಿಕೊಂಡ ತಂದೆ

ಹಾಸನ: ಮಗಳ ಸಾವಿನಿಂದ ತೀವ್ರವಾಗಿ ಮನನೊಂದು ಅಳಿಯನ ಮನೆ ಮುಂದೆಯೇ ತಂದೆ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮೃತನನ್ನು ಎಸ್.ಸೋಮನಹಳ್ಳಿಯ ನಾಗರಾಜ್ (55) ಎಂದು ಗುರುತಿಸಲಾಗಿದೆ. ಮಗಳಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ಮಾಳೆಗೆರೆ ಗ್ರಾಮದ ಅಳಿಯನ ಮನೆ ಬಾಗಿಲಲ್ಲಿ ಎಡೆಯಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗಳ ಸಾವಿನಿಂದಾದ ನೋವು, ಮಗಳ ಸಾವಿನ ನಂತರದ ಘಟನೆಗಳಿಂದ ಕುಗ್ಗಿ ಹೋಗಿದ್ದ ನಾಗರಾಜ್​, ನಿನ್ನೆ (ಡಿ.8) ಅಳಿಯನ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ, ಅಳಿಯ, ಆತನ ತಾಯಿ ಹಾಗು ಸಂಬಂಧಿಕರ ಬಗ್ಗೆ ಆರೋಪ ಮಾಡಿದ್ದಾರೆ.
ವರ್ಷದ ಹಿಂದಷ್ಟೇ ನಾಗರಾಜ್ ಅವರು ತಮ್ಮ ಪುತ್ರಿ ಹೇಮಶ್ರಿಯನ್ನು ಮಾಳೆಗೆರೆಯ ಪ್ರವೀಣ್ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದರು.
ನಂತರದಲ್ಲಿ ಅಳಿಯ ಮಾತ್ರ ಮಗಳ ಗರ್ಭಪಾತಕ್ಕೆ ಯತ್ನಿಸಿದ್ದ ಎಂದು ಮೃತ ನಾಗರಾಜ ಕುಟುಂಬ ಆರೋಪಿಸಿದೆ.
ಮಗಳಿಗೆ ಅತ್ತೆಯ ಮನೆಯವರು ಕಿರುಕುಳ ನೀಡಿದ್ದರಿಂದ ಆಕೆ ಹೆರಿಗೆ ಸಮಯದಲ್ಲಿ ಸಾವಿಗೀಡಾಗಿದಳು ಎಂದು ಪಾಲಕರು ದೂರಿದ್ದಾರೆ. ಸಾವಿನ ಬಳಿಕ ಮಗಳ ಮರಣಾನಂತರ ಕಾರ್ಯಗಳನ್ನು ಕೂಡ ಸರಿಯಾಗಿ ಮಾಡಿಲ್ಲ ಎಂದು ತಂದೆ ನಾಗರಾಜ್​ ಮನನೊಂದಿದ್ದರು.  ಅಲ್ಲದೆ, ಅಳಿಯ ಪಡೆದಿದ್ದ ಎರಡು ಲಕ್ಷ ರೂ. ಸಾಲವನ್ನು ಸಹ ಹಿಂದಿರುಗಿಸಲಿಲ್ಲ ಎಂದು ನಾಗರಾಜ್​ ಬೇಸತ್ತಿದ್ದರು. ಅಲ್ಲದೆ, ನಾಗರಾಜ್ ಮಗಳು ಹೇಮಶ್ರೀ ತಿಂಗಳ ಹಿಂದೆ ಮೃತಪಟ್ಟಿದ್ದಳು.   ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್ ಬಂದಿದ್ದರು  ಎನ್ನಲಾಗದೆ. ಈ  ಸಂದರ್ಭದಲ್ಲಿ ಮಗಳ ಮನೆಯವರು ಮನೆಯಲ್ಲಿಯೇ ಇರಲಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಮನನೊಂದು ಅಳಿಯನ ಮನೆ ಮುಂದೆ ಮಗಳಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ಎಡೆಯಿಟ್ಟು ಅವರ ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಪೊಲೀಸ್‌ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತಿಳಿಯಬೇಕಿದೆ.

ಪ್ರಮುಖ ಸುದ್ದಿ :-   ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ನಂತರ ಮುಂಬೈನಲ್ಲಿ ಪತ್ತೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement