ಕಾಶಿಯಲ್ಲಿ ‘ಗಂಗಾ ಆರತಿ’ಯಂತೆ ಹರಿಹರದಲ್ಲಿ ‘ತುಂಗಾ ಆರತಿ ಮಂಟಪ’ ನಿರ್ಮಾಣ: ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಶಿಯ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪಗಳನ್ನು ನಿರ್ಮಾಣದ 30 ಕೋಟಿ ರೂ. ವೆಚ್ಚದ ಯೋಜನೆಗೆ ಜನವರಿ 14, 15 ರ ಹರಜಾತ್ರೆ ವೇಳೆ ಚಾಲನೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹರಿಹರದ ಪಂಚಮಸಾಲಿ ಗುರುಪೀಠದ ಆಶ್ರಯದಲ್ಲಿ ನಡೆಯಲಿರುವ ಹರಜಾತ್ರೆಯ ಲಾಂಛನ, ಧ್ವನಿಸುರುಳಿ, ಟಿ ಶರ್ಟ್‌ಗಳನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು ”ವಚನಾನಂದ ಶ್ರೀಗಳ ಆಶಯದಂತೆ ತುಂಗಾ ಆರತಿ ಯೋಜನೆಗೆ ಚಾಲನೆ ನೀಡಲಾಗುವುದು. ಸಮಾಜ ಕಟ್ಟುವ ಜೊತೆಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಶ್ರೀಗಳಲ್ಲಿ ಸ್ಪಷ್ಟತೆ ಇದೆ. ಸಮಾಜದ ಸಮಸ್ಯೆಗಳಷ್ಟೇ ಅಲ್ಲ, ಪರಿಹಾರ ಸ್ವರೂಪವನ್ನು ನೀಡಿದ್ದಾರೆ. ಹರ ಜಾತ್ರೆ ನೆಪದಲ್ಲಿ ನಾಡು-ನುಡಿ ಸಂಸ್ಕೃತಿಯನ್ನು ಕಟ್ಟೋಣ. ಸಂಸ್ಕೃತಿಯನ್ನು ಬೆಳೆಸೋಣ ಎಂದರು.
ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರೀಗಳು ಶ್ರಮಿಸುತ್ತಿದ್ದು, ಹರಜಾತ್ರೆಯಲ್ಲಿ ಯುವ ಸಮೂಹಕ್ಕೆ ಎನ್‌ಇಪಿ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಶ್ಲಾಘಿಸಿದರು.
ಪಂಚಮಸಾಲಿಗಳ 2ಎ ಮೀಸಲಿನ ಬಗ್ಗೆ ಶ್ರೀಗಳು ಆಳ ಅಧ್ಯಯನ ನಡೆಸಿದ್ದಾರೆ. ದಾಖಲೆಗಳನ್ನು ಕ್ರೋಢೀಕರಿಸಿ ಸರಕಾರಕ್ಕೂ ಸಹಾಯ ಮಾಡಿದ್ದಾರೆ. ಮೀಸಲು ವಿಚಾರದಲ್ಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಬಗ್ಗೆ ಸೂಕ್ತ ಸಲಹೆ, ಸಹಕಾರ ನೀಡಿದ್ದು, ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದರು.
ಹರಿಹರದ ತುಂಗಭದ್ರಾ ನದಿ ದಡದಲ್ಲಿರುವ ರಾಘವೇಂದ್ರರ ಮಠದದಿಂದ ಹರಿಹರೇಶ್ವರ ದೇವಸ್ಥಾನದ ಮಧ್ಯದಲ್ಲಿ ತುಂಗಾ ಮಂಟಪಗಳನ್ನು ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ಇದಕ್ಕೆ 30 ಕೋಟಿ ರೂ. ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. 108 ಮಂಟಪ ನಿರ್ಮಾಣ, ಗಂಗಾ ಆರತಿಯಂತೆ ಪ್ರತಿನಿತ್ಯ ತುಂಗಾ ಆರತಿ, ಪೂಜೆ ನಡೆಸುವ ಯೋಜನೆ ಇದಾಗಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕ ಒಂದೂಗೂಡಿಸುವ ಮಹತ್ವದ ಯೋಜನೆ ಇದಾಗಿದೆ,” ಎಂದು ವಚನಾನಂದ ಶ್ರೀಗಳು ತಿಳಿಸಿದ್ದಾರೆ.
ಹರಮಾಲೆ ಕಾರ್ಯಕ್ರಮವು ಹರಿಹರ ಪಂಚಮಸಾಲಿ ಪೀಠದ ದೂರದೃಷ್ಟಿಯ ಸಂಕಲ್ಪ. ಸಾಮಾಜಿಕ ಬದಲಾವಣೆಯಲ್ಲಿ ಇದು ದೊಡ್ಡ ಪಾತ್ರ ವಹಿಸುತ್ತದೆ. ನಡತೆ ತಪ್ಪಿದವರನ್ನು ತಿದ್ದುವ, ದುಶ್ಚಟಗಳಿಗೆ ದಾಸರಾದವರನ್ನು ಮುಕ್ತಿಗೊಳಿಸುವ, ಧೂಮಪಾನ- ಮದ್ಯಪಾನದಂಥ ಸಾಮಾಜಿಕ ಪಿಡುಗುಗಳಿಗೆ ತಿಲಾಂಜಲಿ ಇಡುವ ಮಹಾಸಂಕಲ್ಪ ಹರಜಾತ್ರೆಯ ಉದ್ದೇಶವಾಗಿದೆ ಎಂದರು.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement