ಕೋಲಾರ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆರ್.ಎಲ್ ಜಾಲಪ್ಪ ನಿಧನರಾಗಿದ್ದಾರೆ.
ಅಂಗಾಂಗಳ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 98 ವರ್ಷದ ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ಇಂದು (ಶುಕ್ರವಾರ) ಸಂಜೆ ನಿಧನರಾಗಿದ್ದಾರೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಶ್ವಾಸಕೋಶ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಡಿ.10ರಂದು ಕೋಲಾರದ(olar) ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿದ್ದ ಜಾಲಪ್ಪ 4 ಬಾರಿ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸಚಿವರಾಗಿದ್ದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು.
ಆರ್.ಎಲ್. ಜಾಲಪ್ಪ 19 ಅಕ್ಟೋಬರ್ 1925 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಜನಿಸಿದ್ದರು.
ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದಿರುವ ಆರ್ ಎಲ್ ಜಾಲಪ್ಪ ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದರು.
1980-83 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1983-96 ಸದಸ್ಯರು, ಕರ್ನಾಟಕ ವಿಧಾನಸಭೆ
1983-84 ಮತ್ತು 1985-86 ಮಂತ್ರಿ, ಸಹಕಾರ, ಕರ್ನಾಟಕ ಸರ್ಕಾರ
1986-87 ಮಂತ್ರಿ, ಗೃಹ ವ್ಯವಹಾರಗಳ, ಕರ್ನಾಟಕ ಸರ್ಕಾರ
1995-96 ಸಚಿವ, ಕಂದಾಯ, ಕರ್ನಾಟಕ ಸರ್ಕಾರ
1996 11 ನೇ ಲೋಕಸಭೆಗೆ ಚುನಾಯಿತ ಜವಳಿ
1996-98 ಕೇಂದ್ರ ಜವಳಿ ಸಚಿವ
1998 12 ನೇ ಲೋಕಸಭೆ ಮರುಚುನಾಯಿತರಾದವರು(2 ನೇ ಪದ)
1998-99 ಸದಸ್ಯರು, ಹಣಕಾಸು ಸಮಿತಿ ಸದಸ್ಯ, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸದಸ್ಯರು ಸಮಿತಿ , ಸಲಹಾ ಸಮಿತಿಯ ಸದಸ್ಯರು ಕೃಷಿ ಸಚಿವಾಲಯ.
1999 ಮರುಚುನಾಯಿತರಾದವರು 13 ನೇ ಲೋಕಸಭೆ (3 ನೇ ಪದ)
1999-2000 ಸದಸ್ಯರು, ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರು.
2004 ಮರುಚುನಾಯಿತರಾದವರು 14 ಲೋಕಸಭೆ (4ನೇ ಅವಧಿಗೆ),
2006 ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರು
ನಿಮ್ಮ ಕಾಮೆಂಟ್ ಬರೆಯಿರಿ