ಜೀವಂತ ಇರುವವರನ್ನು ಮಾತನಾಡಿಸಿ…ನಾನು ನಾಲ್ಕು ದಿನಗಳ‌ ಹಿಂದೆಯೇ ಸತ್ತು ಹೋಗಿದ್ದೇನೆ: ರಮೇಶಕುಮಾರ್

ಬೆಳಗಾವಿ: ನಾನು‌ ಈಗ ಜೀವಂತ ಇಲ್ಲ, ನಾಲ್ಕು ದಿನಗಳ‌ ಹಿಂದೆಯೇ ಸತ್ತು ಹೋಗಿದ್ದೇನೆ. ನೀವು ಜೀವಂತ ಇರುವವರನ್ನು ಮಾತನಾಡಿಸಿ” ಎಂದು ಎಂಇಎಸ್ ಪುಂಡಾಟಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಶಾಸಕ ರಮೇಶಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸದೆ ಕೈ ಮುಗಿದ ಅವರು ಅವರು, “ನೀವು ಜೀವಂತ ಇರುವವರನ್ನು ಮಾತನಾಡಿಸಿ, ನಾನು‌ ಜೀವಂತ ಇಲ್ಲ, ನಾಲ್ಕು ದಿನಗಳ‌ ಹಿಂದೆಯೇ ನಾನು ಸತ್ತು ಹೋಗಿದ್ದೇನೆ” ಎಂದು ಹೇಳಿದ್ದಾರೆ.
ಇನ್ನು ಕಳೆದ ವಾರ ಸದನದಲ್ಲಿ ಎಲ್ಲರೂ ಮಾತನಾಡಲು ಆರಂಭಿಸಿದರೆ ಏನು ಮಾಡುವುದು, ಲೆಟ್ ಅಸ್ ಎಂಜಾಯ್ ದ ಸಿಚುವೇಷನ್ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಳಿದಾಗ ಎದ್ದು ನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರ ತಡೆಯಲು ಸಾಧ್ಯವಿಲ್ಲವೆಂದರೆ ಮಲಗಿ ಆನಂದಿಸಿ ಎಂಬ ಇಂಗ್ಲಿಷ್‌ ವಾಕ್ಯವನ್ನು ಉಲ್ಲೇಖಿಸಿದ್ದರು. ಅವರ ಈ ಹೇಳಿಕೆಗೆ ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಅವರ ಪಕ್ಷವಾದ ಕಾಂಗ್ರೆಸ್ಸಿನಲ್ಲಿಯೇ ಘಟನಾಘಟಿ ನಾಯಕರಾದ ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕು ಮಾಜಿ ಸ್ಪೀಕರ್‌ ಆಗಿರುವ ರಮೇಶಕುಮಾರ ಹೇಳಿಕೆಯನ್ನು ಖಂಡಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಕಾರವಾರ: ಕೊಡಸಳ್ಳಿ ಡ್ಯಾಂ ರಸ್ತೆಯಲ್ಲಿ ಗುಡ್ಡ ಕುಸಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement