ಮೊಬೈಲ್​ ಕದ್ದ ಆರೋಪ: ಮಂಗಳೂರಲ್ಲಿ ಮೀನುಗಾರನ ತಲೆಕೆಳಗು ಮಾಡಿ ತೂಗು ಹಾಕಿ ಅಮಾನವೀಯತೆ !

ಮಂಗಳೂರು: ಮೊಬೈಲ್ ಕಳ್ಳತನ ಮಾಡಿರುವ ಆರೋಪದಡಿ ಮೀನುಗಾರನೋರ್ವನನ್ನು ತಲೆಕೆಳಗೆ ಮಾಡಿ ನೇತು ಹಾಕಿ ಶಿಕ್ಷೆ ನೀಡಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಲ ಶೀನು ಎಂಬ ಮೀನುಗಾರನನ್ನೇ ಈ ರೀತಿ ಅಮಾನವೀಯವಾಗಿ ತಲೆಕೆಳಗು ಮಾಡಿ ನೇತುಹಾಕಲಾಗಿದೆ.
ವೈಲ್​ ಶೀನು ಆಂಧ್ರಪ್ರದೇಶದ ಮೂಲದ ಮೀನುಗಾರನಾಗಿದ್ದು, ಮಂಗಳೂರಿನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಮಂಗಳೂರಿನ ಧಕ್ಕೆಯಲ್ಲಿ ಮೀನುಗಾರರೊಬ್ಬರ ಮೊಬೈಲ್ ಕಳೆದು ಹೋಗಿತ್ತು. ಇದನ್ನು ವೈಲ ಶೀನು ಕದ್ದಿದ್ದಾನೆ ಎಂದು ಆರೋಪಿಸಿ ಆತನನ್ನು ಬೋಟಿನಲ್ಲಿ ಅಮಾನವೀಯವಾಗಿ ವಿಚಾರಿಸಿದ್ದಾರೆ. ಅಲ್ಲದೆ, ಬೋಟ್ ನಲ್ಲೇ ಆತನ ಕಾಲಿಗೆ ಹಗ್ಗಕಟ್ಟಿ ತಲೆಕೆಳಗು ಮಾಡಿ ನೇತುಹಾಕಿ ವಿಚಾರಣೆ ನಡೆಸಿದ್ದಾರೆ. ಇವರೆಲ್ಲರೂ ಆಂಧ್ರಪ್ರದೇಶ ಮೂಲದ ಕಾರ್ಮಿಕರಾಗಿದ್ದಾರೆ. ಮೀನುಗಾರನ ತಲೆಕೆಳಗೆ ಮಾಡಿ ತೂಗು ಹಾಕಿ ಶಿಕ್ಷೆ ನೀಡಿದ ಘಟನೆ ನಡೆದು ಕೆಲವು ದಿನಗಳ ಹಿಂದೆ ನಡೆದಿದ್ದು, ಇದರ ವಿಡಿಯೋ ಇದೀಗ ಪೊಲೀಸರಿಗೆ ಲಭಿಸಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement