ಪನ್ವೇಲ್‌ ಫಾರ್ಮ್‌ಹೌಸ್‌ನಲ್ಲಿ ಹಾವಿನಿಂದ ಕಚ್ಚಿಸಿಕೊಂಡ ನಟ ಸಲ್ಮಾನ್ ಖಾನ್

ಮುಂಬೈ: ನಟ ಸಲ್ಮಾನ್ ಖಾನ್ ಅವರಿಗೆ ಪನ್ವೇಲ್‌ ಫಾರ್ಮ್‌ಹೌಸ್‌ನಲ್ಲಿ ಹಾವು ಕಚ್ಚಿದೆಯಂತೆ. ಇಂದು ಬೆಳಗ್ಗೆ (ಭಾನುವಾರ) ಈ ಘಟನೆ ನಡೆದಿದೆ. ಎಂಜಿಎಂ ಆಸ್ಪತ್ರೆಯಲ್ಲಿ ಸಲ್ಮಾನ್ ಖಾನ್ ಚಿಕಿತ್ಸೆ ಪಡೆದಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಲ್ಮಾನ್ ಖಾನ್ ಕೈಗೆ ಹಾವು ಕಚ್ಚಿದ್ದು, ಈಗ ಸಲ್ಮಾನ್ ಆರೋಗ್ಯ ಚೆನ್ನಾಗಿದೆ ಎಂದು ಹೇಳಲಾಗಿದೆ. ಮನೆಯಲ್ಲಿ ಸಲ್ಮಾನ್ ಖಾನ್ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸಲ್ಮಾನ್ ಖಾನ್‌ಗೆ ವೈದ್ಯರು ಔಷಧ ನೀಡಿದ್ದಾರೆ. ಕೆಲ ಗಂಟೆಗಳ ಕಾಲ ವೈದ್ಯರು ಸಲ್ಮಾನ್ ಖಾನ್‌ ಅವರನ್ನು ಪರೀಕ್ಷೆ ಮಾಡಿದ ನಂತರದಲ್ಲಿ ಮನೆಗೆ ಹೋಗಲು ಹೇಳಿದ್ದಾರೆ. ಡಿಸೆಂಬರ್ 27ಕ್ಕೆ ಸಲ್ಮಾನ್ ಖಾನ್ ಬರ್ತ್‌ಡೇ ಇದ್ದು, ಫಾರ್ಮ್‌ಹೌಸ್‌ನಲ್ಲಿ ಅವರು ಜನ್ಮದಿನಾಚರಣೆ ಮಾಡುವ ತಯಾರಿಯಲ್ಲಿದ್ದರು. ಆದರೆ ಹಾವು ಕಡಿದಿರುವುದರಿಂದ ಸಲ್ಮಾನ್ ವಿಶ್ರಾಂತಿ ಪಡೆಯಲಿದ್ದಾರೆ. ನಟನೆ ಜೊತೆಗೆ ಸಲ್ಮಾನ್ ಖಾನ್‌ಗೆ ಕೃಷಿ ಬಗ್ಗೆ ಒಲವಿದೆ.ಲಾಕ್‌ಡೌನ್‌ನಲ್ಲಿಯೂ ಈ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್ ಸಮಯ ಕಳೆದಿದ್ದರು. ಸಲ್ಮಾನ್ ಅವರ ಫಾರ್ಮ್‌ಹೌಸ್ ದೊಡ್ಡದಾಗಿದೆ ಮತ್ತು ಸಾಕಷ್ಟು ಕಾಡು ಮತ್ತು ಅರಣ್ಯ ಭೂಪ್ರದೇಶದಲ್ಲಿದೆ. ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳೊಂದಿಗೆ ಅಪಾರವಾದ ಸಸ್ಯ ಮತ್ತು ಪ್ರಾಣಿಗಳಿವೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement