ಬೆಂಗಳೂರು: ಬೆಂಗಳೂರಿನ ಯಲಹಂಕ ಬಿಇಒ ಟಿ.ಎನ್. ಕಮಲಾಕರ ಎಂಬವರು ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಕಮಲಾಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯ ಪೀಡಿತರಾಗಿದ್ದ ಬಿಇಒ ಟಿ.ಎನ್.ಕಮಲಾಕರ್ ಮನನೊಂದುಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅನಾರೋಗ್ಯದ ಸಮಸ್ಯೆ ಸಾಕಷ್ಟು ಬಳಲಿದ್ದೆ. ಇದುವರೆಗೆ 25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ. ಅನಾರೋಗ್ಯದಿಂದ ಜೀವನವೇ ಸಾಕು ಅನ್ನಿಸಿದೆ. ನನ್ನ ಕುಟುಂಬದವರು ಇಲ್ಲಿಯವರೆಗೆ ನೋಡಿಕೊಂಡಿರುವುದು ನಿಜಕ್ಕೂ ನನ್ನ ಅದೃಷ್ಟ. ಆದರೆ ಅವರಿಗೆ ಇನ್ನೂ ಹೆಚ್ಚು ನೋವು ಕೊಡಲು ನನಗೆ ಇಷ್ಟ ಇಲ್ಲ. ನಮ್ಮ ಮನೆಯವರು ಎಲ್ಲರೂ ತುಂಬಾ ಒಳ್ಳೆಯವರು. ಇನ್ಮುಂದೆ ಯಾರಿಗೂ ತೊಂದರೆ ಕೊಡಬಾರದು ಎಂದು ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಕಮಲಾಕರ್ ಅವರು ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಡಿಗೇಹಳ್ಳಿ ಲೇಔಟ್ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ