ಬಿಎಂಟಿಸಿಗೆ 40 ವಿದ್ಯುತ್ ಬಸ್ ಸೇರ್ಪಡೆ: ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ಬಹು ನಿರೀಕ್ಷೆಯ 40 ಎಲೆಕ್ಟ್ರಿಕ್ ಬಸ್ಸುಗಳು ಹಾಗೂ 150 ಭಾರತ್ ಸ್ಟೇಜ್-VI ಡೀಸೆಲ್ ಬಸ್ಸುಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೋಮವಾರ ಚಾಲನೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಮುಂಭಾಗದಲ್ಲಿ ಈ ವಾಹನಗಳನ್ನು ಅನಾವರಣಗೊಳಿಸಿದರು. ಎರಡು ತಿಂಗಳ ಹಿಂದೆಯೇ ಈ ಬಸ್ಸುಗಳು ರಸ್ತೆಗಿಳಿಯಬೇಕಿತ್ತು. ಆದರೆ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಸೇರಿದಂತೆ ವಿವಿಧ ಕಾರಣಗಳಿಂದ ಅದು ವಿಳಂಬವಾಗಿತ್ತು.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್-ಜೆಬಿಎಂ ಗ್ರೂಪ್ ಜಂಟಿ ಉದ್ಯಮದಿಂದ 90 ಮಧ್ಯಮ ಗಾತ್ರದ ಬಸ್ಸುಗಳಲ್ಲಿ (ಮಿನಿಬಸ್ಸುಗಳು) 40 ಇ-ಬಸ್ಸುಗಳನ್ನು ಸರಬರಾಜು ಮಾಡಲಾಗಿದೆ. ಎಲ್ಲ 90 ಬಸ್ಸುಗಳನ್ನು ಡಿಸೆಂಬರ್‌ 15ರೊಳಗೆ ತಲುಪಿಸಬೇಕಾಗಿತ್ತು. ಬಸ್ಸುಗಳಿಗೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಿಂದ ಅನುದಾನ ನೀಡಲಾಗಿದೆ. ಇವು ಮೆಟ್ರೋದ ಆರಂಭ ಮತ್ತು ಕೊನೆಯ ನಿಲ್ದಾಣಗಳಿಂದ ಸಂಪರ್ಕವನ್ನು ಒದಗಿಸಲು ಫೀಡರ್ ಮಾರ್ಗಗಳಲ್ಲಿ ಸಂಚರಿಸುತ್ತವೆ.
“ಈ ಬಸ್‌ಗಳು ನಾನ್ ಎಸಿ, 9 ಮೀಟರ್ ಉದ್ದದ 33+1 ಸೀಟುಗಳು, ವಾಹನ ಟ್ರ್ಯಾಕಿಂಗ್ ಘಟಕಗಳು, ಸಿಸಿಟಿವಿ, ಎಲ್‌ಇಡಿ ರೂಟ್ ಡಿಸ್ಪ್ಲೇ ಬೋರ್ಡ್‌ಗಳು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ತುರ್ತು ಪ್ಯಾನಿಕ್ ಬಟನ್ ಒಳಗೊಂಡಿದೆ” ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೇಳಿಕೆಯಲ್ಲಿ ತಿಳಿಸಿದೆ. .
150 ಬಿಎಸ್ -VI ಡೀಸೆಲ್ ಬಸ್ಸುಗಳನ್ನು ಅಶೋಕ್ ಲೇಲ್ಯಾಂಡ್ ಸರಬರಾಜು ಮಾಡಿದೆ. 2017-18ರ ರಾಜ್ಯ ಬಜೆಟ್‌ನಲ್ಲಿ ಭರವಸೆ ನೀಡಿದ ಹಣದಿಂದ ಈ ಬಸ್ಸುಗಳನ್ನು ಖರೀದಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement